ಹುಬ್ಬಳ್ಳಿ: ಬಾರ್ ವೊಂದರಲ್ಲಿ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಮಾರಾಮಾರಿ ನಡೆದಿದ್ದು, ಓರ್ವನಿಗೆ ಗಂಭೀರ ಗಾಯಗಳಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಈಗಷ್ಟೇ ನಡೆದಿದೆ.

ಶಕ್ತಿವೆಲ್ ಅಲಿಯಾಸ್ ಚೋಟು ಎಂಬಾತನೇ ಹಲ್ಲೇಗೆ ಒಳಗಾದ ವ್ಯಕ್ತಿಯಾಗಿದ್ದು, ಕೇಶ್ವಾಪುರದ ಗೇಟ್ ವೇ ಬಾರ್ ನಲ್ಲಿ ಈ ಘಟನೆ ಜರುಗಿದೆ.

ಕುಡಿತದ ವಿಚಾರಕ್ಕೆ ಶಕ್ತಿವೆಲ್ ಹಾಗೂ ಚಿಕ್ಯಾ ಎಂಬಾತನ ನಡುವೆ ಮಾತಿಗೆ ಮಾತು ಬೆಳೆದಿದ್ದು, ಆಗ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಶಕ್ತಿವೆಲ್ ಮೇಲೆ ಮನಬಂದಂತೆ ಚಿಕ್ಯಾ ಹಾಗೂ ಆತನ ಸಹಚರರು ಹಲ್ಲೇ ಮಾಡಿದ್ದಾರೆ.
ಈ ಒಂದು ಘಟನೆ ಕೇಶ್ವಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಕಿಮ್ಸ್ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.