ಹುಬ್ಬಳ್ಳಿ: ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಆರೋಗ್ಯ ಸಮಿತಿಯ ಸದಸ್ಯ \”ಮಹಮ್ಮದ್ ದಾವೂದ್ MD\’ ಮೇಲೆ ನಡೆದ ಡೆಡ್ಲಿ ಅಟ್ಯಾಕ್ ಕುರಿತು ನಿಮ್ಮ \”ಕರ್ನಾಟಕ ಪಬ್ಲಿಕ್ ವಾಯ್ಸ್\” ಕೂತುಹಲಕಾರಿ ಸಂಗತಿಗಳನ್ನು ಬಿಚ್ಚಿಡುತ್ತಿದೆ. ಈ ಮೂಲಕ ಸತ್ಯಾಸತ್ಯತೆಯನ್ನು ಬಹಿರಂಗಗೊಳಿಸುವ ಕೆಲಸ ಮಾಡುತ್ತಿದೆ.
ಹೌದು, ಅಟ್ಯಾಕ್ ಕುರಿತು ಸ್ವತಃ ಮಹಮ್ಮದ್ ದಾವೂದ್ ಮಾತನಾಡಿದ್ದು, ತಮ್ಮ ಮೇಲೆ ಯಾರು ಅಟ್ಯಾಕ್ ಮಾಡಿದ್ದಾರೆ…? ಯಾವ ಕಾರಣಕ್ಕೆ ಮಾಡಿದ್ದಾರೆ…? ಮತ್ತೆ ಹತ್ಯೆಗೆ ಸಹೋದರ ಮೊಹಮ್ಮದ್ ಅಲಿ ಸಂಚು ರೂಪಿಸಿದ್ರಾ..? ಇಲ್ಲಾ ಇಮ್ತಿಯಾಜ್ ಕೊಲೆ ವೈಷಮ್ಯ ಕಾರಣ ಆಯ್ತಾ…? ಎಂಬ ಪ್ರಶ್ನೆಗಳಿಗೆ ದಾವೂದ್ ಉತ್ತರಿಸಿದ್ದಾರೆ. ಈ ಬಗ್ಗೆ ಅವರು ಏನ ಹೇಳಿದ್ದಾರೆ ಕೇಳಿ….????????
https://youtu.be/VBV9SYofID0?si=xBDvldIvRR6AUxLn
ಮೊಹಮ್ಮದ್ ದಾವೂದ್ MD
ದಾವೂದ್ ಹತ್ಯೆಯ ಸಂಚು ರೂಪಿಸಿದ್ದಾರೆಂಬ ಆರೋಪ ಹೊತ್ತಿರುವ ದಾವೂದ್ ಸಹೋದರ ಮೊಹಮ್ಮದ್ ಅಲಿ ಮಾತನಾಡಿರುವ exclusive ವಿಡಿಯೋ ಕೂಡಾ ನಿಮ್ಮ \”ಕರ್ನಾಟಕ ಪಬ್ಲಿಕ್ ವಾಯ್ಸ್\’ಗೆ\” ಲಭ್ಯವಾಗಿದ್ದು, ಅದರಲ್ಲಿ ಮೊಹಮ್ಮದ್ ಅಲಿ, ದಾವೂದ್ ನಮ್ಮ ತಮ್ಮಾ ರೀ… ಒಂದೇ ರಕ್ತದಿಂದ ಬಂದೇವಿ ರೀ… ನಾ ಯಾಕ ಅವನಿಗೆ ಕೊಲೆ ಮಾಡ್ಲಿ, ನಾ ಕೊಲೆ ಮಾಡಾಕ್ ಸಂಚು ರೂಪಿಸೇನಿ ಅನ್ನೋದು ಸುಳ್ರಿ, ಇದೊಂದು ಪ್ರೀ-ಪ್ಲಾನ್\’ದಿಂದ ಮಾಡ್ಯಾರ ರೀ. ನಾ ಕೊಲೆ ಮಾಡಾಕ್ ಸಾಥ್ ಕೊಟ್ಟೇನಿ ಅಂತ ಯಾರ ಸುಳ್ಳ ಹೇಳ್ಯಾರ ಅಲ್ಲ, ಅದನ್ನ ಸಾಬೀತು ಮಾಡಿಕೊಡಬೇಕ ರೀ… ಇಲ್ಲಾ ಅಂದ್ರ ಕಾನೂನು ಹೋರಾಟ ಮಾಡತ್ತೇನೆ ರೀ… ಮೊಹಮ್ಮದ್ ಅಲಿ ಏನೇನ ಹೇಳಿದ್ದಾರೆ ಇಲ್ಲಿದೆ ನೋಡಿ ಸಂಪೂರ್ಣ ವಿಡಿಯೋ…????????
https://youtu.be/4UAH0LGuPuU?si=ocCkJVjyIIujy5KT
ಮಹಮ್ಮದ್ ಅಲಿ, ದಾವೂದ್ ಸಹೋದರ
ಎರಡೂ ಮಕ್ಕಳು ನಮ್ಮವ ಅದಾವ ರೀ, ಕೊಲೆ ಮಾಡೋ ಸ್ಕೇಚ್-ಗಿಚ್ ಕೆಲಸ ಮಾಡಂಗಿಲ್ಲ ರೀ ಅವರು, ನಮಗ ಐದು ಗಂಡ ಮಕ್ಕಳ, ಮೂರು ಹೆಣ್ಣ ಮಕ್ಕಳ ಅದಾವ್ ರೀ, ನಮ್ಮ ಮಧ್ಯೆ ಯಾವುದೇ ರಾಡಿ ಇಲ್ಲ ರೀ… ಮೊದಲಿಂದಲೂ ಯಾವ ಜಗಳಾ ನಾವು ಮಾಡಿಲ್ಲ ರೀ… ಇವಾಗ ರಾಜಕೀಯದಾಗ ದಾವೂದ್ ಹೋಗ್ಯಾನ, ಅಲ್ಲಿ ಮಂದಿ ಸುಧಾರಿಸೋ ಕೆಲಸಾ ಮಾಡಾಕತ್ತಾನ, ಇದು ಸರಿ ಕಾಣಸಾಕತ್ತಿಲ್ಲ ರೀ ಅವರಿಗೆ, ಅದಕ್ಕೆ ಅವನಿಗೆ ಕೊಲೆ ಮಾಡೋ ಸಲುವಾಗಿ ಅಟ್ಯಾಕ್ ಮಾಡ್ಯಾರ ನೋಡ್ರಿ… ಎಂದು ಮೊಹಮ್ಮದ್ ಅಲಿ ತಾಯಿ ಫಾತಿಮಾ ಹೇಳತ್ತಾರೆ.
https://youtu.be/Om41BFaZoNc?si=NYD74Cvk3tqXsuGl
ಫಾತಿಮಾ, ಮೊಹಮ್ಮದ್ ಅಲಿ, ದಾವೂದ್ ತಾಯಿ
ಒಟ್ಟಿನಲ್ಲಿ ಮಹಮ್ಮದ್ ದಾವೂದ್ ಮೇಲೆ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಕಾಣದ ಕೈಗಳು ತಮ್ಮ ಆಟವನ್ನು ಪ್ರದರ್ಶಿಸಿ, ಪ್ರಕರಣವನ್ನು ಮತ್ತೊಂದು ದಿಕ್ಕಿಗೆ ತಿರುಗಿಸುವ ಯತ್ನ ನಡೆಸಿದ್ದು, ಈ ಬಗ್ಗೆ ದಕ್ಷ ಪೋಲಿಸ್ ಅಧಿಕಾರಿ ಎಂದೇ ಹೆಸರು ಪಡೆದಿರುವ ಟೌನ್ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ತಹಶಿಲ್ದಾರ ಆ್ಯಂಡ್ ಟೀಮ್ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ತಿಳಿಸುವ ಕೆಲಸ ಮಾಡಬೇಕಿದೆ.