ಹುಬ್ಬಳ್ಳಿ : ಬೈಕ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಆತನಿಂದ 1.80 ಲಕ್ಷ ರೂ ಮೌಲ್ಯದ 3 ಬೈಕಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ವಿದ್ಯಾನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಈರಣ್ಣ ಬಾನಿ (28) ಉಣಕಲ್ ನಿವಾಸಿ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಹಿಡಿದು ಆತನಿಂದ ಹೀರೋ ಎಚ್ ಎಫ್ ಡಿಲಕ್ಸ್,ಹೀರೋ ಹೊಂಡಾ ಸಿಡಿ 100 ಹಾಗೂ ಹೊಂಡಾ ಡಿಯೋ ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿ ಶರಹದ ವಿವಿದೆಡೆ ಬೈಕ್ ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ.
ಆರೋಪಿಯ ಪತ್ತೆಯ ಕಾರ್ಯಾಚರಣೆಯಲ್ಲಿ ಬಾಗಿಯಾದ ವಿದ್ಯಾನಗರ ಪೊಲೀಸ ಠಾಣೆಯ ಇನ್ಸ್ಪೆಕ್ಟರ್ ಡಿ ಕೆ ಪಾಟೀಲ್ ಇವರ ನೇತೃತ್ವದಲ್ಲಿ ಪಿಎಸ್ಐಗಳಾದ ಶ್ರೀಮಂತ ಹುಣಸಿಕಟ್ಟಿ, ಎಸ್. ಬಿ. ಕವಲೂರ್ ಮತ್ತು ಸಿಬ್ಬಂದಿಗಳಾದ ಶಿವಾನಂದ.ಎಮ್.ತಿರಕಣ್ಣವರ, ಮಲ್ಲಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಪರುಶರಾಮ ಹಿರಗಣ್ಣವರ, ಸಯ್ಯದಅಲಿ ತಹಶೀಲ್ದಾರ, ರಮೇಶ ಹಲ್ಲೆ, ಮಂಜುನಾಥ ಏಣಗಿ, ಶರಣಗೌಡಾ ಮೂಲಿಮನಿ, ವಾಯ್.ಎಮ್. ಶೇಂಡ್ಗೆ ಹಾಗೂ ಪ್ರಕಾಶ ಠಕ್ಕಣ್ಣವರ ಇವರ ಕಾರ್ಯವೈಖರಿಯನ್ನು ಪೋಲಿಸ್ ಆಯುಕ್ತರಾದ ರೇಣುಕಾ ಸುಕುಮಾರ್, ಡಿಸಿಪಿಗಳಾದ ರಾಜೀವ್ ಎಂ, ರವೀಶ್ ಸಿ.ಅರ್ ಹಾಗೂ ಎಸಿಪಿ ಶಿವಪ್ರಕಾಶ್ ನಾಯಕ್ ಅವರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.