ಹುಬ್ಬಳ್ಳಿ: ಫೋಟೋ ಸ್ಟುಡಿಯೋ ಒಂದರ ಬಾಗಿಲ ಕೀಲಿ ಮುರಿದು ಸಾವಿರಾರು ರೂಪಾಯಿ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆದಿದೆ.
ಅದರಗುಂಚಿ ಗ್ರಾಮದ ಹೂ-ಬಳ್ಳಿ ಡಿಜಿಟಲ್ ಫೋಟೋ ಸ್ಟುಡಿಯೋದಲ್ಲಿಯೇ ಕಳ್ಳತನವಾಗಿದ್ದು, ಸ್ಟುಡಿಯೋದಲ್ಲಿನ ಲ್ಯಾಪ್ಟಾಪ್, ಚಾರ್ಜರ್ ಹಾಗೂ ಒಂದು ಕ್ಯಾಮರಾವನ್ನು ಕಳ್ಳತನ ಮಾಡಲಾಗಿದೆ.
ಸ್ಟುಡಿಯೋ ಮಾಲೀಕರಾದ ಚೇತನ ಹೆರಕಲ್ ಎಂದಿನಂತೆ ಇಂದು ಸ್ಟುಡಿಯೋಗೆ ಬಂದು ನೋಡಿದಾಗ ಕಳ್ಳತನವಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ತಕ್ಷಣ ಸ್ಟುಡಿಯೋ ಮಾಲೀಕರು ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ಕಳ್ಳತನ ವಿಷಯ ತಿಳಿಸಿದ್ದು, ಸ್ಥಳಕ್ಕೆ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.