ಹುಬ್ಬಳ್ಳಿ: ಪಾಸ್ ಮತ್ತು ಪರ್ಮಿಟ್ ಇಲ್ಲದೆ ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ ಮದ್ಯ ತುಂಬಿದ್ದ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿ, ಅಂದಾಜು 52,300ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ನೂಲ್ವಿಕ್ರಾಸ್ ಚನ್ನಮಠ ನಿವಾಸಿ ಮಂಜುನಾಥ ಗಂಡುಡಿ ಬಂಧಿತ ವ್ಯಕ್ತಿ. ಈತ ಶನಿವಾರ ಸಂಜೆ ಕಾರವಾರ ರಸ್ತೆ ದೇವರಗುಡಿಹಾಳ ಕ್ರಾಸ್ ಬಳಿಯ ತೇಜ್ ವೈನ್ಸ್ದಲ್ಲಿ ಬಿಯರ್, ವಿಸ್ಕಿ ಖರೀದಿಸಿಕೊಂಡು ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದಾಗ ಕೆಇಬಿ ಗ್ರಿಡ್ ಬಳಿ ಸಿಸಿಬಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.