ಧಾರವಾಡ: ಬೈಕ್ ಸವಾರನೊರ್ವ ನಿಯಂತ್ರಣ ತಪ್ಪಿ ಮರಕ್ಕೆ ಡಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಧಾರವಾಡದ ಸಪ್ತಾಪುರದ ಬಳಿಯಲ್ಲಿ ಜರುಗಿದೆ.
ಸಪ್ತಾಪುರದ ನಿವಾಸಿ ಸಾಯಿರಾಮ ಜಾತ್ಮಲ್ಲಿ (29) ಎಂಬಾತನೇ ಸಾವನ್ನಪ್ಪಿದ್ದು, ಈತ ಎಂದಿನಂತೆ ಕೆಯುಡಿಯ ಮೈದಾನದಲ್ಲಿ ಕ್ರಿಕೆಟ್ ಆಡಲು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಸಾಯಿರಾಮ್ ಜಾತ್ಮಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಳಿಕ ಸಂಚಾರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಕುರಿತು ಧಾರವಾಡ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.