ಹುಬ್ಬಳ್ಳಿ: ಬೈಕ್ ಸವಾರನಿಗೆ ಖಾಸಗಿ ಸಂಸ್ಥೆಯ ಬಸ್ಸೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಹೊರವಲಯದ ಗಬ್ಬೂರು ಬೈಪಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಜರುಗಿದೆ.
ಕೆಲಸ ಮುಗಿಸಿ ಮನೆಗೆ ಹೋಗುವ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಬಳಿಕ ಸ್ಥಳೀಯರು ಪೋಲಿಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಪೋಲಿಸರು ಆಗಮಿಸಿ ಮೃತನ ಶವವನ್ನು ಕಿಮ್ಸ್ ಶವಾಗಾರಕ್ಕೆ ರವಾನಿಸಿದ್ದಾರೆ.
ಇನ್ನು ಅಂದಾಜು 40 ವರ್ಷದ ವಯಸ್ಸಿನ ಆಸುಪಾಸಿನ ವ್ಯಕ್ತಿ ಮೃತನಾಗಿದ್ದು, ಈತ ಯಾರು? ಎಲ್ಲಿಯವನು? ಎಂಬ ಮಾಹಿತಿ ಇನ್ನಷ್ಟೇ ಪೋಲಿಸ ತನಿಖೆಯಿಂದ ತಿಳಿದುಬರಬೇಕಿದೆ.