ಹುಬ್ಬಳ್ಳಿ: ಬಸ್ ಹತ್ತುವ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಪ್ರಕರಣವನ್ನು ಭೇದಿಸಿರುವ ಗೋಕುಲರೋಡ್ ಪೋಲಿಸ್ ಠಾಣೆಯ ಪೋಲಿಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ತಮಿಳ್ನಾಡಿನ ಕುಪ್ಪಂ ನಿವಾಸಿ ಸಂದ್ಯಾ ಅಲಿಯಾಸ್ ಶರಣ್ಯಾ ಬಂಧಿತ ಆರೋಪಿಯಾಗಿದ್ದು, ಈಕೆ ಜ.5 ರಂದು ಹುಬ್ಬಳ್ಳಿಯ ಗೋಕುಲರಸ್ತೆಯ ಹೊಸ ಬಸ್ ನಿಲ್ದಾಣದ ಹತ್ತಿರದ ಪ್ಲಾಟ್ ಫಾರಂ 4 ರಲ್ಲಿ ದಂಪತಿಗಳು ಬಸ್ ಹತ್ತುವ ಸಂದರ್ಭಗಳಲ್ಲಿ ವ್ಯಾನಿಟಿ ಬ್ಯಾಗ್\’ನಲ್ಲಿದ್ದ 139 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಳು. ಈ ಬಗ್ಗೆ ಗೋಕುಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಪ್ರವೀಣ ನೀಲಮ್ಮನವರ ನೇತೃತ್ವದ ತಂಡ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತಳಿಂದ 9.50 ಲಕ್ಷ ರೂ ಮೌಲ್ಯದ 139 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಇನ್ನು ಪ್ರಕರಣವನ್ನು ಬೆಳಕಿಗೆ ತಂದ ತನಿಖಾ ತಂಡದಲ್ಲಿ ಪಿಎಸ್ಐ ದೇವೆಂದ್ರ ಮಾವಿನಂಡಿ, ಎ.ಎಸ್.ಐ ಜಿ.ಸಿ.ರಜಪೂತ, ಸಿಬ್ಬಂದಿಗಳಾದ ರಾಜು ಹೊಂಕಣದವರ, ಚಂದ್ರು ನಡುವಿನಮನಿ, ವಸಂತ ಗುಡಗೇರಿ, ಪ್ರಕಾಶ ತಗಡಿನಮನಿ, ಜಗದೀಶ ಮತ್ತಿಗಟ್ಟಿ, ಲಕ್ಷ್ಮಣ ನಾಯಕ, ಶಿವಾನಂದ ಕೆಂಪೋಡಿ, ಮಹೇಶ ವೆನ್ನೂರ, ಶರಣಪ್ಪ ಕೋರಿ, ಸುರೇಶ ಕೋಲಿ, ವೀಣಾ ಹಿಪ್ಪರಗಿಮಠ, ತಾಂತ್ರಿಕ ಸಿಬ್ಬಂದಿ ಜಿ.ಜಿ.ಚಿಕ್ಕಮಠ, ರಾಘವೇಂದ್ರ ಭಡಂಕರ, ರವಿ ಗೋಮಪ್ಪನವರ ಇದ್ದಾರೆ. ಇವರ ಕಾರ್ಯವನ್ನು ಪೋಲಿಸ್ ಆಯುಕ್ತರು ಶ್ಲಾಘಿಸಿದ್ದಾರೆ.