ಹುಬ್ಬಳ್ಳಿ: ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಓರ್ವ ವ್ಯಕ್ತಿಯನ್ನು ಕೇಂದ್ರ ತನಿಖಾ ದಳದವರ ಆದೇಶದ ಮೇರೆಗೆ ರಾಜ್ಯ ತನಿಖಾ ದಳ ಹಾಗೂ ಹುಬ್ಬಳ್ಳಿ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಈ ಹಿಂದೆ ಭಯೋತ್ಪಾದಕ ಚಟುವಟಿಕೆ ಒಂದರಲ್ಲಿ ಭಾಗಿಯಾಗಿದ್ದ ಶೋಯಬ್ ಮಿರ್ಜಿ ಎಂಬಾತನನ್ನೇ ತನಿಖೆಗೆ ಒಳಪಡಿಸಿದ್ದು, ಈತ ಪತ್ರಕರ್ತರ ಸೋಗಿನಲ್ಲಿದ್ದ ಎಂದು ಹೇಳಲಾಗುತ್ತಿದೆ. ಇದೀಗ ಈತನನ್ನು ವಿಚಾರಣೆಗೆ ಒಳಪಡಿಸಿದ್ದು, ಈ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದುಬರಬೇಕಿದೆ.