ಧಾರವಾಡ: ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್\’ನಲ್ಲಿದ್ದ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಧಾರವಾಡದ ಗರಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಅಪಘಾತದಲ್ಲಿ ಧಾರವಾಡ ಕೇಂದ್ರ ಕಾರಾಗೃಹದಲ್ಲಿ KSISF ಪೇದೆಯಾಗಿದ್ದ ರುದ್ರಪ್ಪ ಸಿದ್ದಣ್ಣನವರ ಎಂಬಾತರು ಮೃತಪಟ್ಟಿದ್ದಾರೆ. ಇವರು ಬೆಳವಡಿಯಿಂದ ಗರಗದ ಮೂಲಕ ಕರ್ತವ್ಯಕ್ಕೆ ಹಾಜರಾಗಲು ಧಾರವಾಡಕ್ಕೆ ಬರುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಘಟನಾ ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ತೆರಳಿದ್ದು, ಇನ್ನಷ್ಟೆ ಮಾಹಿತಿ ತಿಳಿದುಬರಬೇಕಿದೆ.