ಹುಬ್ಬಳ್ಳಿ: ಪೋಲಿಸರೆಂದರೆ ರಕ್ಷಕರು, ಕಾನೂನು ಕಾಪಾಡುವವರು, ನ್ಯಾಯ ಒದಗಿಸುವವರು ಎಂಬ ಮಾತಿದೆ. ಆದರೆ ಜನರನ್ನು ರಕ್ಷಣೆ ಮಾಡಬೇಕಾದ ಪೋಲಿಸರೇ ನ್ಯಾಯ ಕೇಳಲು ಬಂದ ವ್ಯಕ್ತಿಯ ಮೇಲೆ ಹಲ್ಲೇ ಮಾಡಿದ ಗಂಭೀರವಾದ ಆರೋಪ ಇದೀಗ ಹುಬ್ಬಳ್ಳಿಯ ಬೆಂಡಿಗೇರಿ ಪೋಲಿಸರ ಮೇಲೆ ಕೇಳಿಬಂದಿದೆ.
ಇಲ್ಲಿನ ಗಂಗಾಧರ ನಗರದ ನಿವಾಸಿ ಅಭಿಷೇಕ ಭಜಂತ್ರಿ ಎಂಬಾತನೇ ಪೋಲಿಸರ ಮೇಲೆ ಈ ವೊಂದು ಗಂಭೀರವಾದ ಆರೋಪ ಮಾಡಿದ್ದು, ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದಾನೆ. ಶುಕ್ರವಾರ ಮನೆಯಲ್ಲಿ ಸಂಬಂಧಿಕರ ನಿಶ್ಚಿತಾರ್ಥದ ಕಾರಣ ಸಮಾರಂಭದಲ್ಲಿ ಭಾಗಿಯಾಗಿದ್ದನಂತೆ, ಬಳಿಕ ಕಾರ್ಯಕ್ರಮ ಮುಗಿಸಿ ಓಣಿಯಲ್ಲಿ ನಿಂತಾಗ ಯುವಕರ ನಡುವೆ ಹಳೆಯ ವೈಷಮ್ಯಕ್ಕೆ ತಂಟೆ ನಡೆದಿದೆಯಂತೆ, ಆಗ ವಿಷಯ ತಿಳಿದು ಬೆಂಡಿಗೇರಿ ಪೋಲಿಸರು ಸ್ಥಳಕ್ಕೆ ಬಂದಿದ್ದಾರಂತೆ. ಈ ವೇಳೆ ಹಿರಿಯರು ಠಾಣೆಯ ಮೆಟ್ಟಿಲು ಹತ್ತುವುದು ಬೇಡ, ಇಲ್ಲಿಯೇ ಮುಗಿಸೋಣ ಎಂದು ಹೇಳಿದ್ದಾರಂತೆ. ಈ ಮಾತಿನಂತೆ ಎಲ್ಲವೂ ಸರಿಯಾಗುವ ಸಂದರ್ಭದಲ್ಲಿ ಪುನಃ ಬೆಂಡಿಗೇರಿ ಪೋಲಿಸರು ಅಭಿಷೇಕನನ್ನು ಕರೆಸಿ ಅವಾಚ್ಯವಾಗಿ ನಿಂದಿಸಿ, ಎಂಟು ಜನ ಪೋಲಿಸರು ಸೇರಿಕೊಂಡು ಬೂಟುಗಾಲಿನಿಂದ ಒದ್ದು, ಮನಸೋ ಇಚ್ಚೆ ಥಳಿಸಿದ್ದಾರಂತೆ.
ಅಷ್ಟೇ ಅಲ್ಲದೇ ಅಭಿಷೇಕ ಗಾಯಗೊಂಡು ನೆಲದ ಬಿದ್ದು ಉಸಿರುಗಟ್ಟುವ ಪರಿಸ್ಥಿತಿಗೆ ಹೋದಾಗ, ತಮ್ಮ ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿ ಅಭಿಷೇಕ ತಮ್ಮ ಶರ್ಟ್\’ಗೆ ಹಿಡಿದ ಕಾರಣಕ್ಕೆ ಹೊಡೆದಿದ್ದೇವೆ ಎಂದು ಹೇಳಿ, ಪೋಲಿಸರೇ ಕಿಮ್ಸ್ ಆಸ್ಪತ್ರೆಗೆ ಅಡ್ಮಿಟ್ ಮಾಡಿ, ಸುಳ್ಳು ಎಮ್\’ಎಲ್\’ಸಿ ಮಾಡಿಸಿದ್ದಾರೆಂಬ ಆರೋಪವನ್ನು ಇದೀಗ ಅಭಿಷೇಕ ಮಾಡುತ್ತಿದ್ದಾನೆ.
ಒಟ್ಟಿನಲ್ಲಿ ಜನರಿಗೆ ರಕ್ಷಣೆ ಕೊಡಬೇಕಾದ ಪೋಲಿಸರೇ ಭಕ್ಷಕರಂತೆ ವರ್ತನೆ ಮಾಡಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಜ್ಞಾವಂತರು ಪ್ರಶ್ನೆ ಮಾಡುತ್ತಿದ್ದು, ಕೆಲವು ಪೋಲಿಸರು ಮಾಡುವ ಕೆಲಸದಿಂದ ಇಡೀ ಪೋಲಿಸ್ ಇಲಾಖೆಗೆ ಕಳಂಕ ಬರುವ ಸಾದ್ಯತೆ ಇದೆ. ಈ ಬಗ್ಗೆ ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಅವರು ಯಾವ ರೀತಿ ಕ್ರಮ ಕೈಗೊಳ್ಳತ್ತಾರೆ. ಹಲ್ಲೆಗೆ ಒಳಗಾದ ಯುವಕನಿಗೆ ನ್ಯಾಯ ಸಿಗುತ್ತದೆಯೇ ಎಂಬುದನ್ನು ಕಾದು ನೋಡೋಣಾ.