ಹುಬ್ಬಳ್ಳಿ: ಕೆಲಸ ಇದೆ ಅರ್ಜೆಂಟ್ ಆಗಿ ಬಾ ಎಂದು ಫೋನ್ ಮಾಡುವ ಮೂಲಕ ವ್ಯಕ್ತಿಯನ್ನು ಕರೆಯಿಸಿಕೊಂಡು ಮನಸೋ ಇಚ್ಚೆ ಹಲ್ಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ದ್ಯಾಮಪ್ಪ ಕುರಿ ಹಲ್ಲೆಗೆ ಒಳಗಾದ ವ್ಯಕ್ತಿ. ಈತನನ್ನು ಮಹಾಂತೇಶ್ ಅನ್ನೋ ವ್ಯಕ್ತಿಯು ಅರ್ಜೆಂಟ್ ಆಗಿ ಬಾ ನಿನ್ನ ಹತ್ತಿರ ಕೆಲಸ ಇದೆ ಅಂತ ಕರೆಸಿಕೊಂಡು, ಕಾರಿನಲ್ಲಿ ಕರೆದುಕೊಂಡು ಹೋಗಿ ಬಡಿಗೆ ಹಾಗು ರಾಡಿನಿಂದ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ ಅಂತ ದ್ಯಾಮಪ್ಪ ಮಾದ್ಯಮದ ಮುಂದೆ ನನ್ನ ಅಳಲನ್ನು ತೋಡಿಕೊಂಡಿದ್ದಾನೆ.
ದ್ಯಾಮಪ್ಪ ತನ್ನ ಪತ್ನಿ ಮಲ್ಲವ್ವ ಕುರಿ ಜೊತೆಗೆ ಇನ್ನೋರ್ವ ಮಹಿಳೆಯನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದನು, ಇದಕ್ಕೆ ಕೋಪಗೊಂಡ ಮಹಾಂತೇಶ್ ಆಕೆಯನ್ನು ಏಕೆ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿಯಾ, ಅವಳ ಜೊತೆಗೆ ನಿನ್ನ ಸಂಬಂಧವಿದೆಯಾ ಎಂದು ಬೆದರಿಕೆ ಹಾಕಿ ತೀವ್ರವಾಗಿ ಮಾಂತೇಶ್ ಹಾಗು ಆತನ ಸಂಗಡಿಗರು ಸುಜಾತಾ ಟಾಕೀಸ್ ಹತ್ತಿರ ಹಲ್ಲೆ ಮಾಡಿದ್ದಾರೆ ಎಂದು ದ್ಯಾಮಪ್ಪಾ ಹಾಗೂ ಆತನ ಪತ್ನಿ ಮಲ್ಲವ್ವ ಗಂಭೀರವಾಗಿ ಆರೋಪಿಸಿದ್ದಾರೆ.
ನನ್ನ ಪತಿ ಅವರ ಕೊಡುವ ಚಿತ್ರಹಿಂಸೆಯಿಂದ ಸತ್ತರೆ ಯಾರು ಹೊಣೆ ನನ್ನ ಕೌಟುಂಬಿಕ ಜೀವನ ಕಷ್ಟದಲ್ಲಿ ಸಾಗುತ್ತಿದೆ. ಹಳೇ ದ್ವೇಷ ಏನಿಲ್ಲಾ, ಕೇವಲ ಕಲ್ಲವ್ವ ಎಂಬ ಮಹಿಳೆಯಿಂದ ಈ ಘಟನೆ ನಡದಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಇನ್ನೂ ಕುರಿತಂತೆ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಒಟ್ಟಾರೆಯಾಗಿ ಅವಳಿನಗರದಲ್ಲಿ ರೌಡಿಗಳಿಗೆ ಪೊಲೀಸರ ಭಯವಿಲ್ಲದಂತಾಗಿದೆ. ನಗರದಲ್ಲಿ ಪೊಲೀಸರ ಗಮನಕ್ಕೆ ಬಾರದೆ ಇಂತಹ ಎಷ್ಟೋ ಘಟನೆಗಳು ನಡೆಯುತ್ತವೆ, ಹಲ್ಲೆ ಮಾಡಿ ಹಲ್ಲೆಗೆ ಒಳಗಾದ ವ್ಯಕ್ತಿಗಳನ್ನು ಹೆದರಿಸಿ ಬಾಯಿ ಮುಚ್ಚಿಸುವ ಕೆಲಸವೂ ನಡೆಯುತ್ತಿದೆ, ಹೀಗೆ ಆದರೆ ಜನರ ಜೀವದ ಜೊತೆ ಆಟವಾಡುವ ಪುಡಿ ರೌಡಿಗಳಿಗೆ ಪೊಲೀಸರ ಭಯವೆ ಇಲ್ಲದಂತಾಗಿ ಇಂತಹ ಘಟನೆಗಳಿಂದ ಎಷ್ಟೋ ಅಮಾಯಕರು ಹಲ್ಲೆಗೆ ಒಳಗಾಗಿದ್ದಾರೆ. ಪೊಲೀಸರು ಇಂತಹ ಘಟನೆಗಳ ಬಗ್ಗೆ ಗಮನ ಹರಿಸಿ ಪುಂಡಾಟಿಕೆ ಮೆರೆಯುವ ರೌಡಿಗಳಿಗೆ ಸರಿಯಾದ ಪಾಠ ಕಲಿಸುವ ಮೂಲಕ ಅಪರಾಧಗಳನ್ನು ತಡೆಯುವ ಕೆಲಸ ಮಾಡಬೇಕಾಗಿದೆ.