ಹುಬ್ಬಳ್ಳಿ: ಕೆಲವು ವರ್ಷಗಳ ಹಿಂದೆ ಪಾಲಿಕೆ ಸದಸ್ಯ ಆರಿಫ್ ಭದ್ರಾಪೂರ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿ ಪರಾರಿಯಾದ ವ್ಯಕ್ತಿಯನ್ನು ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೈಫ್ ಅಲಿ ಬಾಂಬೆ ಬಂಧಿತ ಆರೋಪಿ. ಇತನು 2016 ರಲ್ಲಿ ಗಣೇಶ್ ಪೇಟ್ ನಿವಾಸಿ ಆರಿಫ್ ಬದ್ರಾಪುರ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಆರಿಫ್ ಅವರು ಪ್ರಾಣಾಪಾಯದಿಂದ ಪರಾಗಿದ್ದರು. ಈ ಘಟನೆ ಕುರಿತು ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನಿನ ಮೇರೆಗೆ ಹೊರ ಬಂದ ಸೈಫ್ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇತನ ಮೇಲ್ ವಾರಂಟ್ ಕೂಡ ಜಾರಿಯಾಗಿತ್ತು. ಈಗ ಎಂಟು ವರ್ಷಗಳ ಬಳಿಕ ಹುಬ್ಬಳ್ಳಿಯ ನವನಗರದಲ್ಲಿ ಖಚಿತ ಮಾಹಿತಿ ಮೇರೆಗೆ ಶಹರ ಠಾಣೆಯ ಇನ್ಸ್ಪೆಕ್ಟರ್ ತಹಶೀಲ್ದಾರ್ ನೇತೃತ್ವದ ತಂಡ ಬಂಧಿಸಿ ಜೈಲ್ ಗೆ ಅಟ್ಟಿದ್ದಾರೆ.