ಹುಬ್ಬಳ್ಳಿ: ಪರಿಸರ ಸಂರಕ್ಷಣೆಯೆ ನಮ್ಮೆಲ್ಲರ ಹೊಣೆ ಎಂಬ ಧ್ಯೇಯದೊಂದಿಗೆ ಎಫ್.ಸಿ.ಸಿ ಸದಸ್ಯರ ತಂಡವು ಭಾನುವಾರದಂದು ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಗ್ರಾಮದಲ್ಲಿ ಸುಮಾರು 200 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಗ್ರಾಮದ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿ ದೇವಸ್ಥಾನ ಆವರಣ, ಉದ್ಯಾನವನ ಮತ್ತು ಊರಿನ ಪ್ರಮುಖ ರಸ್ತೆಗಳಲ್ಲಿ ಯುವಕರು ಉತ್ಸುಕತೆಯಿಂದ ಸಸಿ ನೆಟ್ಟು ಗ್ರಾಮದಲ್ಲಿ ಹೊಸತನ ಮೂಡಿಸುವಲ್ಲಿ ಮುಂದಾದರು.
ಈ ವೇಳೆ ಎಫ್.ಸಿ.ಸಿ ಕಮೀಟಿ ಸದಸ್ಯರಾದ ಅಶೋಕ ಹೂಗಾರ, ಶಿವಾನಂದ ಬೀಸಗಲ್, ಸುಧಾಕರ ಮಾಳಗಿ, ರಮೇಶ್ ಮಾಳಗಿ, ಶಿವಾನಂದ ಶಿಗ್ಗಾಂವಿ, ಉಮೇಶ್ ಕಾಡಮ್ಮನವರ, ಹನೀಫ್ ನರಗುಂದ, ಶಿವಾನಂದ ಮಾಳಗಿ, ಕರಬಸಪ್ಪ ಅವರಾದಿ, ರಾಜು ಬೆಂಗೇರಿ, ಕರೆಪ್ಪ ಮುಮ್ಮಿಗಟ್ಟಿ ಸೇರಿದಂತೆ ಮೊದಲಾದವರು ಭಾಗಿಯಾಗಿದ್ದರು.