ಗದಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರ ಆದೇಶದಂತೆ ನಗರದ ವಿವಿಧ ಕಡೆಗಳಲ್ಲಿ ಹೆಚ್ಚುತ್ತಿದ್ದ ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಗದಗ ಶಹರ ಪೊಲೀಸ ಠಾಣೆಯ ತಂಡ ಕೊನೆಗೂ ಹಾವೇರಿ ಮೂಲದ ಆರೋಪಿ ಶಿವರಾಜ್ ಜಾಧವ ಎಂಬ ಬೈಕ್ ಲಿಪ್ಟರ್ (ಕಳ್ಳ)ನನ್ನು ಬಂಧಿಸಿ ಆತನಿಂದ 1,25,000 ರೂ, ಕಿಮ್ಮತ್ತಿನ ಮೂರು ಬೈಕಗಳನ್ನು ವಶಪಡಿಸಿಕೊಂಡು ಬಂಧಿತ ಆರೋಪಿ ಶಿವರಾಜ್ ನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ ಎಸ್ ಸಂಕದ, ಉಪಾಧೀಕ್ಷಕ ಜೆ ಹೆಚ್ ಇನಾಮದಾರ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ಡಿ ಬಿ ಪಾಟೀಲ್ ನೇತೃತ್ವದಲ್ಲಿ ಪಿಎಸ್ಐ, ಆರ್ ಆರ್ ಮುಂಡೆವಾಡಗಿ, ಪಿಎಸ್ಐ ಹೆಚ್ ಕೆ ಪಾಟೀಲ್, ಎಎಸ್ಐ, ವಾಯ್ ಬಿ ಪಾಟೀಲ್, ಸಿಬ್ಬಂದಿಗಳಾದ ಎಂ ಬಿ ವಡ್ಡಟ್ಟಿ, ಕೆ ಡಿ ಜಮಾದಾರ, ಎ ಎಫ್ ಹಣಜಿ, ಪ್ರವೀಣ ಕಲ್ಲೂರ, ಪಿ ಎ ಭರಮಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ತಂಡದ ಈ ಕಾರ್ಯಕ್ಕೆ ಪೊಲೀಸ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.