ಹುಬ್ಬಳ್ಳಿ: ಹುಬ್ಬಳ್ಳಿ ನಗರ ಪೊಲೀಸ್ ಠಾಣೆ ಹಾಗೂ ಕಮರಿಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಅಂಗಡಿಗಳ ಸರಣಿ ಕಳ್ಳತನ ಮಂಗಳವಾರ ಬೆಳಗಿನ ಜಾವ ನಡೆದಿದೆ.
ನಗರದ ಮಹಾವೀರಗಲ್ಲಿ ಒಂದು ಹಾಗೂ ಬಟರ್ ಮಾರ್ಕೆಟ್ ನಲ್ಲಿ 2 ಅಂಗಡಿಗಳ ಕಳ್ಳತನ ನಡೆದಿದ್ದು, ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಬಟರ್ ಮಾರ್ಕೆಟ್ ಅಂಗಡಿಯೊಂದರಲ್ಲಿ ಸುಮಾರು 60 ಸಾವಿರ ರೂ. ಕಳ್ಳತನವಾಗಿದೆ ಎಂದು ಅಂಗಡಿ ಮಾಲೀಕರು ಈ ಕುರಿತು ದೂರು ನೀಡಿದ್ದಾರೆ.
ಉಳಿದ ಅಂಗಡಿಗಳ ಶಟರ್ಸ್ ಗಳನ್ನು ಮುರಿದಿದ್ದು, ಹಣ ಹಾಗೂ ವಸ್ತುಗಳ ಕಳ್ಳತನವಾಗಿಲ್ಲ ಎಂದು ತಿಳಿದು ಬಂದಿದ್ದು, ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ. ಘಟನೆ ಕುರಿತಂತೆ ಶಹರ ಪೊಲೀಸ್ ಠಾಣೆ ಹಾಗೂ ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.