By using this site, you agree to the Privacy Policy and Terms of Use.
Accept
Karnataka Public VoiceKarnataka Public VoiceKarnataka Public Voice
Notification Show More
Font ResizerAa
  • Home
    • Home 2
    • Home 3
    • Home 4
    • Home 5
  • U.K News
    U.K News
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Technology
    TechnologyShow More
  • Posts
    • Post Layouts
    • Gallery Layouts
    • Video Layouts
    • Audio Layouts
    • Post Sidebar
    • Review
      • User Rating
    • Content Features
    • Table of Contents
  • Pages
    • Blog Index
    • Contact US
    • Search Page
    • 404 Page
    • Customize Interests
    • My Bookmarks
  • Join Us
Reading: ಗಾಂಜಾ ಮಾಫಿಯಾ ವಿರುದ್ಧ ಹುಬ್ಬಳ್ಳಿ ಧಾರವಾಡ ಪೊಲೀಸರ ಸಮರ…
Font ResizerAa
Karnataka Public VoiceKarnataka Public Voice
  • ES Money
  • U.K News
  • The Escapist
  • Entertainment
  • Science
  • Technology
  • Insider
  • Home
    • Home News
    • Home 2
    • Home 3
    • Home 4
    • Home 5
  • Categories
    • Technology
    • Entertainment
    • The Escapist
    • Insider
    • ES Money
    • U.K News
    • Science
    • Health
  • Bookmarks
    • Customize Interests
    • My Bookmarks
  • More Foxiz
    • Blog Index
    • Sitemap
Have an existing account? Sign In
Follow US
Drugsಡ್ರಗ್ ಮಾಫಿಯಾ

ಗಾಂಜಾ ಮಾಫಿಯಾ ವಿರುದ್ಧ ಹುಬ್ಬಳ್ಳಿ ಧಾರವಾಡ ಪೊಲೀಸರ ಸಮರ…

ADMIN
Last updated: November 20, 2024 11:47 am
ADMIN Published July 12, 2024

ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲದ ವಿರುದ್ಧ ಹುಬ್ಬಳ್ಳಿ ಧಾರವಾಡ ಪೋಲೀಸರು ಸಮರ ಸಾರಿದ್ದಾರೆ.

ಈ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿ ಮೊದಲ ಹಂತವಾಗಿ ಗಾಂಜಾ ಮಾರಾಟಗಾರರ ಹಾಗೂ ಖರೀದಿದಾರರ ಹೆಡೆಮುರಿ ಕಟ್ಟುವಲ್ಲಿ ಹು-ಧಾ ಪೋಲಿಸ್ ಕಮಿಷ್ನರೇಟ್ ಯಶಸ್ವಿಯಾಗಿದೆ.

ಹೌದು, ಇಷ್ಟು ದಿನ ಗಾಂಜಾ ಮತ್ತು ಡ್ರಗ್ಸ್ ಪ್ರಕರಣಗಳಲ್ಲಿ ಕೇವಲ ಮಾರಾಟಗಾರರನ್ನೇ ಬಂಧಿಸುತ್ತಿದ್ದ ಪೊಲೀಸರು ಇದೀಗ ಡ್ರಗ್ಸ್ ಮತ್ತು ಗಾಂಜಾ ಮೂಲಗಳನ್ನು ಪತ್ತೆ ಹಚ್ಚಿ ಬರೋಬ್ಬರಿ ಹತ್ತು ಜನರ ಬಂಧನ ಮಾಡುವಲ್ಲಿ ಬೆಂಡಿಗೇರಿ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ.

\"\"

ಬೆಳಂಬೆಳಿಗ್ಗೆ ಖಚಿತ ಮಾಹಿತಿ ಮೇರೆಗೆ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಹಾಗೂ ಅವರ ಬಳಿ ಖರೀದಿ ಮಾಡಲು ಜನರು ನಿಂತಿದ್ದಾರೆಂಬ ಮಾಹಿತಿ ಆಧರಿಸಿ ಬೆಂಡಿಗೇರಿ ಪೊಲೀಸರು ಹು-ಧಾ ಪೋಲಿಸ್ ಆಯುಕ್ತ ಎನ್.ಶಶಿಕುಮಾರ್, ಹಾಗೂ ಡಿಸಿಪಿಗಳಾದ ಎಮ್.ನಂದಗಾವಿ, ರವೀಶ್ ಸಿ.ಆರ್ ಅವರ ಮಾರ್ಗದರ್ಶನದಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸ ಇನ್ಸ್ಪೆಕ್ಟರ್ ಅಲಿಶೇಖ್ ಅವರ ನೇತೃತ್ವದ ತಂಡ ದಾಳಿ ಮಾಡಿ ಗಾಂಜಾ ಮಾರಾಟಗಾರರು ಹಾಗೂ ಖರೀದಿದಾರರನ್ನು ಬಂಧಿಸಿದ್ದಾರೆ.

\"\"

ಬಂಧಿತರನ್ನು ಅಕಿಲೇಶ್ ಎರಮಾಶನ್,ಅಂತೋನಿ ಪರ್ನಾಂಡಿಸ್, ಕಿರಣ ಕುರಕುಂದಿ, ಮಹದೇವ ಮಜ್ಜಿಗುಡ್ಡ, ಪ್ರಕಾಶ ಕಲಾಲ್, ಅರುಣ ಕ್ಯಾಕಟ್ಟಿ, ಲಕ್ಷ್ಮಣ ನಿಡಗುಂದಿ, ಪರಾನ್ ನವಲಗುಂದ, ಆದರ್ಶ ಎರಮಶಲ್, ವಿಶಾಲ ಗಾಯಕವಾಡ ಎಂದು ಗುರುತಿಸಲಾಗಿದೆ. ಇವರಿಂದ ಒಟ್ಟು 1.78 ಲಕ್ಷ ಕಿಮ್ಮತ್ತಿನ 1.8 ಕೆಜಿ ಹಾಗೂ 2000 ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅವಳಿನಗರವನ್ನು ಗಾಂಜಾ ಮುಕ್ತ ನಗರವನ್ನಾಗಿ ಮಾಡುವಲ್ಲಿ ಪೊಲೀಸರು ಶಪಥ ಮಾಡಿದ್ದಾರೆ.

\"\"

ಇನ್ನು ಈ ಬಗ್ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿದ್ದು, ಹು-ಧಾ ಪೋಲಿಸ್ ಕಮಿಷ್ನರೇಟ್ ವ್ಯಾಪ್ತಿಯ ಬೆಂಡಿಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 1.8 ಕೆಜಿ ಗಾಂಜಾ ವಶಪಡಿಸಿಕೊಂಡು, 10 ಜನರ ಬಂಧನ ಮಾಡಲಾಗಿದೆ. ಬಂಧಿತರು ಹುಬ್ಬಳ್ಳಿ ಹಾಗೂ ಅಕ್ಕಪಕ್ಕದ ನಿವಾಸಿಗಳಾಗಿದ್ದಾರೆ. ಬಂಧಿತರಲ್ಲಿ ಹಲವರ ಮೇಲೆ ಡ್ರಗ್ಸ್ ಹಾಗೂ ಗಾಂಜಾ ಮಾರಾಟದ ಕೇಸ್\’ಗಳಿವೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಈ ಹಿಂದಿನ ಕೇಸ್\’ಗಳನ್ನು ಪರಿಶೀಲಿಸಿದ್ದೇನೆ. ಅವುಗಳನ್ನು ಸಮಗ್ರ ತನಿಖೆಗೆ ಸೂಚಿಸಿದ್ದೇನೆ. ಗೋವಾ, ಮಿರಜ್, ಮಹಾರಾಷ್ಟ್ರ ಭಾಗದಿಂದ ಗಾಂಜಾ ಪೂರೈಕೆಯಾಗುವ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ನಗರವನ್ನು ಗಾಂಜಾ ಮುಕ್ತವನ್ನಾಗಿಸಲು ಶ್ರಮಿಸಲಾಗುವುದು ಎಂದರು.

[ruby_related total=5 layout=5]

[Ruby_E_Template id="1714"]
© Foxiz News Network. Ruby Design Company. All Rights Reserved.
Welcome Back!

Sign in to your account