ಹುಬ್ಬಳ್ಳಿ: ಬಾವಿಯಲ್ಲಿ ಅಪರಿಚಿತ ಮಹಿಳೆಯೋರ್ವಳು ಶವ ಪತ್ತೆಯಾದ ಘಟನೆ ನಗರದ ಬೆಂಗೇರಿ-ಉದಯನಗರದಲ್ಲಿರುವ ಗಣೇಶನ ದೇವಸ್ಥಾನದ ಬಳಿಯಲ್ಲಿ ನಡೆದಿದೆ.
ಗಣಪತಿ ದೇವಸ್ಥಾನದ ಆಚಾರ್ಯರು ಬಾವಿ ನೋಡಿದಾಗ ಮಹಿಳೆಯ ಶವ ತೇಲಾಡುತ್ತಿರುವುದನ್ನು ಕಂಡ ಸ್ಥಳೀಯರ ಮುಖಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಎರಡು ಮೂರು ದಿನಗಳ ಹಿಂದೆ ಈ ಮಹಿಳೆ ಬಾವಿಯಲ್ಲಿ ಬಿದ್ದೀರ ಬಹುದು ಎಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಕೇಶ್ವಾಪೂರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾವಿಯಲ್ಲಿ ಬಿದ್ದ ಮಹಿಳೆ ಯಾರು? ಯಾವ ಕಾರಣಕ್ಕೆ ಬಾವಿಯಲ್ಲಿ ಬಿದ್ದಿದ್ದಾಳೆ? ಇದು ಆತ್ಮಹತ್ಯೆಯೋ.. ? ಅಥವಾ ಕೊಲೆಯೋ..? ಇತ್ಯಾದಿ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದು, ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.