ಹುಬ್ಬಳ್ಳಿ: ಕ್ಷುಲಕ ವಿಚಾರಕ್ಕೆ ಯುವಕನ ಮೇಲೆ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಈಗಷ್ಟೆ ಬೈರಿದೇವರಕೋಪದಲ್ಲಿ ನಡೆದಿದೆ.
ಬೈರಿದೇವರಕೊಪ್ಪದ ನಿವಾಸಿ ಪ್ರಜ್ವಲ್ ಅತ್ತರವಾಲೆ (21) ಹಲ್ಲೆಗೆ ಒಳಗಾದ ಯುವಕ. ಹಾಲು ತರಲು ಹೋದ ಸಮಯದಲ್ಲಿ ಏಳರಿಂದ ಎಂಟು ಜನರ ಗುಂಪೊಂದು ಏಕಾಏಕಿ ಈತನ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ. ಹಲ್ಲೆಗೆ ಒಳಗಾದ ಯುವಕನ ಕಣ್ಣಿನ ಬಾಗಕ್ಕೆ ಬಲವಾದ ಗಾಯವಾಗಿದ್ದು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇನ್ನು ಈ ಘಟನೆ ಕುರಿತು ಎಪಿಎಂಸಿ ನವನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.