ಹುಬ್ಬಳ್ಳಿ ಧಾರವಾಡ ಪೊಲೀಸರು ವ್ಹಿಲೀಂಗ್ ಮಾಡುವ ಅಪಾಯದ ಬಗ್ಗೆ ನಿತ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಸಾರ್ವಜನಿಕರ ಸುರಕ್ಷತೆಗೆ ಅಪಾಯ ತಂದೊಡ್ಡುವ ವ್ಹಿಲೀಂಗ್ ಮಾಡಬೇಡಿ ಎಂದು ಎಷ್ಟೇ ಹೇಳಿದರೂ ಪುಂಡರ ಪುಂಡಾಟಿಕೆ ಮುಂದುವರೆದಿದೆ. ಹೆದ್ದಾರಿ, ಪ್ರಮುಖ ರಸ್ತೆ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿಯೂ ಕೂಡ ವ್ಹಿಲೀಂಗ್ ಮಾಡುತ್ತಿದ್ದಾರೆ. ಇದೀಗ, ವಿಶೇಷ ಕಾರ್ಯಾಚರಣೆ ನಡೆಸಿದ ಧಾರವಾಡ ಸಂಚಾರಿ ವಿಭಾಗದ ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ವ್ಹಿಲೀಂಗ್ ಮಾಡುತ್ತಿದ್ದ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಧಾರವಾಡ ಸಂಚಾರ ಪೊಲೀಸ್ ಠಾಣೆಯ ವಿಭಾಗದ ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿ ಸಾರ್ವಜನಿಕರ ಪ್ರಾಣಕ್ಕೆ ಹಾಗೂ ಸಾರ್ವಜನಿಕ ಆಸ್ತಿಗೆ ತೊಂದರೆ ಉಂಟಾಗುವಂತೆ ವಾಹನಗಳನ್ನು ಚಲಾಯಿಸಿ ವ್ಹಿಲೀಂಗ್ ಮಾಡುತ್ತಿದ್ದವರ ವಿರುದ್ಧ ವ್ಹಿಲೀಂಗ್ ಪ್ರಕರಣಗಳನ್ನು ದಾಖಲಿಸಿದೆ ಎಂದು ಮಾಹಿತಿ ನೀಡಿದೆ.
ವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಈ ಪೈಕಿ ಓರ್ವ ಬಾಲಕಿ ಕೋಮಲ್ 22 ಬೈಕ್ ವ್ಹಿಲೀಂಗ್ ಮಾಡುತ್ತಿದ್ದು, ಈ ಹಿನ್ನೆಲೆ ಅವಳ ವೀಲಿಂಗ್ ಮಾಡುತ್ತಿದ್ದ KTM DUKE ಬೈಕ್ 250 ವಶಪಡಿಸಿಕೊಂಡು ಆಕೆಯ ಮೇಲೆ ಕಾನೂನು ಕ್ರಮ ಜರುಗಿಸಿದ್ದಾರೆ. ಹಾಗೂ ಪ್ರಜ್ವಲ್ ಅನ್ನೋ 21 ವರ್ಷದ ವಿದ್ಯಾರ್ಥಿ ಮೇಲೆ ಕೂಡ KTM Duke-350 ಬೈಕ್ ಸಹ ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.