ಹುಬ್ಬಳ್ಳಿ; ನಗರದ ಪ್ರೆಸಿಡೆಂಟ್ ಹೊಟೇಲ್ ಶ್ರೀನಗರ ಹೋಗುವ ರಸ್ತೆಯ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕಿಮ್ಸ್ ಶವಾಗಾರಕ್ಕೆ ಶವವನ್ನು ರವಾನೆ ಮಾಡಲಾಗಿದೆ.
ಇಂದು ಬೆಳಿಗ್ಗೆ ಅಪರಿಚಿತ ಶವ ಪತ್ತೆಯಾಗಿದ್ದು, ವ್ಯಕ್ತಿಯ ಬಳಿ ಚಿಲ್ಲರೆ ಹಣ ಹಾಗೂ ಬಿಸ್ಕೆಟ್ ಪ್ಯಾಕೆಟ್ ಗಳು ದೊರೆತಿವೆ, ಆದರೆ ಈತ ಯಾರು ಎಂಬ ಮಾಹಿತಿ ತಿಳಿದು ಬಂದಿಲ್ಲ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಮುಂದುವರೆದಿದೆ.