By using this site, you agree to the Privacy Policy and Terms of Use.
Accept
Karnataka Public VoiceKarnataka Public VoiceKarnataka Public Voice
Notification Show More
Font ResizerAa
  • Home
    • Home 2
    • Home 3
    • Home 4
    • Home 5
  • U.K News
    U.K News
    Politics is the art of looking for trouble, finding it everywhere, diagnosing it incorrectly and applying the wrong remedies.
    Show More
    Top News
    Latest News
  • Technology
    TechnologyShow More
  • Posts
    • Post Layouts
    • Gallery Layouts
    • Video Layouts
    • Audio Layouts
    • Post Sidebar
    • Review
      • User Rating
    • Content Features
    • Table of Contents
  • Pages
    • Blog Index
    • Contact US
    • Search Page
    • 404 Page
    • Customize Interests
    • My Bookmarks
  • Join Us
Reading: ಮಿತಿ ಮೀರಿ ಬಡ್ಡಿ ಹಣ ಪಡೆದರೆ ಕೇಸ್ ಫಿಕ್ಸ್… ಎನ್ ಶಶಿಕುಮಾರ್..
Font ResizerAa
Karnataka Public VoiceKarnataka Public Voice
  • ES Money
  • U.K News
  • The Escapist
  • Entertainment
  • Science
  • Technology
  • Insider
  • Home
    • Home News
    • Home 2
    • Home 3
    • Home 4
    • Home 5
  • Categories
    • Technology
    • Entertainment
    • The Escapist
    • Insider
    • ES Money
    • U.K News
    • Science
    • Health
  • Bookmarks
    • Customize Interests
    • My Bookmarks
  • More Foxiz
    • Blog Index
    • Sitemap
Have an existing account? Sign In
Follow US
Breaking NewsCrime newsCrime newsHubli Dharwad Policeಅಪರಾಧ

ಮಿತಿ ಮೀರಿ ಬಡ್ಡಿ ಹಣ ಪಡೆದರೆ ಕೇಸ್ ಫಿಕ್ಸ್… ಎನ್ ಶಶಿಕುಮಾರ್..

ADMIN
Last updated: November 20, 2024 11:39 am
ADMIN Published September 1, 2024

ಹುಬ್ಬಳ್ಳಿ: ಸಾರ್ವಜನಿಕರಿಂದ ಬಂದಂತಹ ದೂರಿನ ಆಧಾರದ ಮೇರೆಗೆ ಹು-ಧಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವ 23 ದಂಧೆಕೋರರನ್ನು ಬಂಧಿಸಿ, 16 ಪ್ರಕರಣವನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ತಿಳಿಸಿದರು.

\"\"

ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹುಬ್ಬಳ್ಳಿ ಠಾಣೆಯಲ್ಲಿ 4 ಜನ ಆರೋಪಿಗಳಾದ ರಾಜೇಶ್ ಮೆಹರವಾಡೆ, ಮೋಹಿತ್ ಮೆಹರವಾಡೆ, ಅನೀತಾ ಹಬೀಬ್, ದೀಪಾ ಶೆಲವಡಿ ಇವರ ಮೇಲೆ 2 ಪ್ರಕರಣ, ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸತೀಶ್ ದೊಡ್ಡಮನಿ ವಿರುದ್ಧ 1 ಪ್ರಕರಣ, ಕಮರಿಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧನಲಕ್ಷ್ಮೀ ಮದ್ರಾಸಿ ಎಂಬವಳ ವಿರುದ್ಧ 1 ಪ್ರಕರಣ, ಗೋಕುಲ್ ರೋಡ್ ಪೊಲೀಸ್ ಠಾಣೆ ಯಲ್ಲಿ ಸೋಲೋಮನ್ ಬಬ್ಬಾ, ಆನಂದ ರಾಯಚೂರು ವಿರುದ್ಧ 1 ಪ್ರಕರಣ, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನವೀನ್ ಭಾಂಡಗೆ, ದತ್ತು ಪಟ್ಟನ್ ವಿರುದ್ಧ 2 ಪ್ರಕರಣ, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಸ್ಟೀಫನ್ ಕ್ಷೀರಸಾಗರ ವಿರುದ್ಧ 1 ಪ್ರಕರಣ ದಾಖಲಾಗಿದೆ.

\"\"

ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಸಮೀರ್, ಸೈಯದಲಿ, ಬಿ.ಕೆ.ಬಾಯಿ, ಹ್ಯಾರಿಶ್ ಪಠಾಣ ವಿರುದ್ಧ 2 ಪ್ರಕರಣ, ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಜಾವೇದ್ ಘೋಡೆಸವಾರ ವಿರುದ್ಧ 1 ಪ್ರಕರಣ, ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಶಾಕೀರ ಕರಡಿಗುಡ್ಡ ವಿರುದ್ಧ 1 ಪ್ರಕರಣ, ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಗಿರಿಯಪ್ಪ ಬಳ್ಳಾರಿ, ಬಾಲು ಬಳ್ಳಾರಿ, ಅಭಿಲೇಖಾ ತೋಖಾ ವಿರುದ್ಧ 1 ಪ್ರಕರಣ, ಕಸಬಾ ಪೊಲೀಸ್ ಠಾಣೆಯಲ್ಲಿ ತನ್ವೀರ್ ಜಂಗ್ಲಿವಾಲೆ ವಿರುದ್ಧ 1 ಪ್ರಕರಣ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಾರಾಯಣ ಕಾಟಗಾರ ವಿರುದ್ಧ 1 ಪ್ರಕರಣ ದಾಖಲಾಗಿದೆಂದರು.

ಒಟ್ಟು ಆರೋಪಿತರಿಂದ ಅಂದಾಜು 4 ರೂ. ಮೌಲ್ಯದ ಬೆಳ್ಳಿ ಚೈನ್, ಬೈಕ್ ಗಳು, ಖಾಲಿ ಚೆಕ್, ಬಾಂಡ್ ಪೇಪರ್, ಮೊಬೈಲ್ ಫೋನ್ ಗಳು, ವಾಹನದ ಮೂಲ ದಾಖಲಾತಿಗಳು ಸೇರಿದಂತೆ ಮೊದಲಾದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.

ಇನ್ನೂ ಈ ಹಿಂದೆ 7 ಪ್ರಕರಣದಲ್ಲಿ 25 ಬಡ್ಡಿ ದಂಧೆಕೋರರ ಬಂಧಿಸಲಾಗಿತ್ತು, ಸಾರ್ವಜನಿಕರಿಗೆ ಬಡ್ಡಿ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಬಡ್ಡಿಕುಳಗಳ ಮೇಲೆ ನೊಂದವರು ದೂರು ನೀಡಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್, ಎಸಿಪಿಗಳಾದ ಶಿವಪ್ರಕಾಶ್ ನಾಯಕ್, ಉಮೇಶ್ ಚಿಕ್ಕಮಠ ಸೇರಿದಂತೆ ವಿವಿಧ ಠಾಣೆಯ ಸಿಪಿಐಗಳು ಉಪಸ್ಥಿತರಿದ್ದರು ‌

[ruby_related total=5 layout=5]

[Ruby_E_Template id="1714"]
© Foxiz News Network. Ruby Design Company. All Rights Reserved.
Welcome Back!

Sign in to your account