ಹುಬ್ಬಳ್ಳಿ: ನಗರದ ಇಂದಿರಾ ಗ್ಲಾಸ್ ಹೌಸ್ ಪಕ್ಕದಲ್ಲಿರುವ ಬಾವಿಯಲ್ಲಿ ಯುವಕನೋರ್ವನ ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಗಿರಣಿಚಾಳ ನಿವಾಸಿ ಮೃತಪಟ್ಟಿರುವ ಯುವಕ ಉಲ್ಲೇಶ ಹಾಲಹರವಿ (37) ಎಂದು ಗುರುತಿಸಲಾಗಿದ್ದು, ಸ್ಥಳೀಯರು ಬಾವಿಯಲ್ಲಿದ್ದ ಶವವನ್ನು ಉಪನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಇನ್ಸ್ಪೆಕ್ಟರ್ ಎಂ.ಎಸ್ ಹೂಗಾರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯುವಕನ ಕುತ್ತಿಗೆಗೆ ಚಾಗುವಿನಿಂದ ಕೊಯ್ದಿರುವ ಗುರುತು ಪತ್ತೆಯಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಏನು ಹೇಳಿದ್ದಾರೆ ನೋಡಿ.