ಹುಬ್ಬಳ್ಳಿ: ಗೃಹ ಬಳಕೆ ಸಿಲಿಂಡರ್ ಸ್ಪೋಟ್ ಹಿನ್ನಲೆ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ನಡೆದಿದೆ.
ಸಿದ್ದಲಿಂಗಯ್ಯ ಹಿರೇಮಠ (43), ಪತ್ನಿ ವಿಶಾಲಾ ಹಿರೇಮಠ (35),ಶ್ರೀಪಾದಯ್ಯ ಹಿರೇಮಠ (17), ನಿರ್ಮಲಾ ಹಿರೇಮಠ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಲಿಂಡರ್ ಸ್ಪೋಟ್ ದಿಂದಾಗಿ ಮನೆಗೂ ಹಾನಿಯಾಗಿದ್ದು, ಗಾಯಗೊಂಡವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.