ಹುಬ್ಬಳ್ಳಿ: ನಗರದ ಗದಗ ರಸ್ತೆಯ ಪುರಸಭೆ ಕಾರ್ಪೊರೇಟರ್ ನನ್ನು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಘಟನೆ ನಗರದ ಶಹರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾರಿನಲ್ಲಿ ಹೋಗುತ್ತಿರುವಾಗ, ಕುಡಿತದ ಮತ್ತಿನಲ್ಲಿ ಆಟೋದಲ್ಲಿ ಬಂದ ಮೂರು ಜನ ಯುವಕರ ತಂಡ ಪಾಲಿಕೆ ಸದಸ್ಯ ಹೋಗುತಿದ್ದ ಕಾರಿಗೆ ಅಡ್ಡ ಗಟ್ಟಿ, ಅವ್ಯಾಚ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಯಾರು ಆ ಮೂರು ಜನ ಯುವಕರು..? ಯಾವ ಕಾರಣಕ್ಕೆ ಪಾಲಿಕೆ ಸದಸ್ಯನನ್ನು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ್ದಾರೆ..? ಈ ಎಲ್ಲ ಪ್ರಶ್ನೆಗೆ ಉತ್ತರ ಪೊಲೀಸರ ತನಿಖೆಯ ನಂತರ ತಿಳಿದು ಬರಬೇಕಿಗೆ.