ಹುಬ್ಬಳ್ಳಿ: ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಕಾರ್ ಶೋರೋಂ ಬಳಿ ನಡೆದಿದೆ.
ಗಾಯಗೊಂಡಿರುವ ಬೈಕ್ ಸವಾರ ಅಯ್ಯಾನ್ ನದಾಫ್ (17) ಗೋಪನಕೊಪ್ಪ ನಿವಾಸಿ ಎಂದು ತಿಳಿದು ಬಂದಿದೆ. ಈ ಅಪಘಾತವು ಬಿ.ಆರ್.ಟಿ.ಎಸ್ ರಸ್ತೆಯಲ್ಲಿ ನಡೆದಿದ್ದು, ಹುಬ್ಬಳ್ಳಿ ಕಡೆಗೆ ಬೈಕ್ ಸವಾರ ಹಾಗೂ ಧಾರವಾಡದ ಕಡೆಗೆ ದೆಹಲಿ ಮೂಲದ ಬಿಎಂಡಬ್ಲ್ಯೂ ಕಾರ್ ಹೋಗುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಬೈಕ್ ಸವಾರನ ಕಾಲಿಗೆ ಗಂಭೀರವಾದ ಗಾಯವಾಗಿದ್ದು, ಸ್ಥಳೀಯರು ಗಾಯಗೊಂಡಾತನನ್ನು ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಿ.ಆರ್.ಟಿ.ಎಸ್ ರಸ್ತೆಯಲ್ಲಿ ಈ ಒಂದು ಅಪಘಾತ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.