ಧಾರವಾಡ: ಸದಾ ಹೆಗಲ ಮೇಲೆ ರೈತ ಸಂಕೇತ ಟವೆಲ್ ಹಾಕಿಕೊಂಡು ಓಡಾಟ ಮಾಡುತ್ತಾ ಬಂದಿರೋ ನವಲಗುಂದ ಶಾಸಕ ಎನ್ ಹೆಚ್ ಕೊನರೆಡ್ಡಿಯವರು, ರೈತರ ವಿರುದ್ಧವೇ ನಾಲಿಗೆ ಹರಿಬಿಟ್ಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಸರ್ಕಾರಿ ಉಗ್ರಾಣದಲ್ಲಿ ನಡೆದಿರುವ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರು ಹೋರಾಟ ಕೈಗೊಂಡಿದ್ದರು. ಕಳೆದ ಒಂದು ವಾರದಿಂದ ಅಣ್ಣಿಗೇರಿ ತಾಲೂಕ್ ಬಸ್ ನಿಲ್ದಾಣದ ಬಳಿ ಹೋರಾಟ ನಡೆಸುತ್ತಿದ್ದ ಸ್ಥಳಕ್ಕೆ ಶಾಸಕ ಶಾಸಕ ಎನ್.ಎಚ್.ಕೋನರೆಡ್ಡಿ ಭೇಟಿ ನೀಡಿದ್ದರು. ಈ ವೇಳೆ ರೈತರು ಹಾಗೂ ಶಾಸಕರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ವಾಗ್ವಾದದ ವೇಳೆ ನಾಲಿಗೆ ಹರಿಬಿಟ್ಟು, ಅವಾಚ್ಯ ಶಬ್ದಗಳಿಂದ ರೈತರಿಗೆ ಶಾಸಕ ಅವಾಜ್ ಹಾಕಿ ನಿಂದಿಸಿದ್ದಾರೆ. ರೈತರಿಗೆ ಅವಾಚ್ಯ ಶಬ್ದ ಬಳಕೆ ಮಾಡಿದ ಶಾಸಕ ಅಂತಿತವರನ್ನು ಕರೆದುಕೊಂಡು ಬಂದು ನಮಗೆ ಮಾತನಾಡಲು ಹಚ್ಚಬೇಡಿ ಎಂದು ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ.
ಹಸಿರು ಟವಲ್ ಧರಿಸಿಯೇ ರೈತರಿಗೆ ಅವಾಚ್ಯ ಶಬ್ದ ಬಳಕೆ ಮಾಡಿದ ಶಾಸಕರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಶಾಸಕನ ವಿರುದ್ಧ ರೈತ ವರ್ಗದಿಂದ ಸೊಸಿಯಲ್ ಮೀಡಿಯಾದಲ್ಲಿಯೇ ಆಕ್ರೋಶ ವ್ಯಕ್ತವಾಗುತ್ತಿದೆ. ಹೆಗಲ ಮೇಲೆ ಹಸಿರು ಟಾವೆಲ್ ಹಾಕಿಕೊಂಡು ರೈತರಿಗೆ ಕೊಡುವ ಗೌರವ ಇದೇನಾ. ಶಾಸಕರೇ ನೀವು ಬಳಸಿದ ಪದ ಬಳಕೆ ಸರಿನಾ ಎಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ.