ಹುಬ್ಬಳ್ಳಿ: ಹುಬ್ಬಳ್ಳಿಯ ಯುವಕನೋರ್ವನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಸುದೀಪ್ ಹಾಗೂ ಕಿರಣ್ ಪೊಲೀಸರ ಗುಂಡು ತಿಂದ ಆರೋಪಿಗಳಾಗಿದ್ದಾರೆ.
ಆಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಶಿವರಾಜ್ ಕಮ್ಮಾರ ಎಂಬ ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಆದ್ರೆ ಹತ್ಯೆ ನಡೆದ 6 ಗಂಟೆಯಲ್ಲಿ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಗಳನ್ನು ವಿಚಾರಿಸಿದಾಗ ಇನ್ನು ಕೆಲವರು ನಮ್ಮ ಜೊತೆಗೆ ಇದ್ದರೂ ಅವರೊಂದು ಅದ್ನ್ಯಾತ ಸ್ಥಳದಲ್ಲಿ ಅಡಗಿ ಕುಳಿತಿದ್ದಾರೆ, ಅವರನ್ನು ತೋರಿಸುತ್ತೇವೆ ಅಂತ ಹಳೇ ಹುಬ್ಬಳ್ಳಿ ರೈಲ್ವೆ ಕ್ವಾಟರ್ಸ್ ಬಳಿ ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಸಮಯದಲ್ಲಿ ಹಂಕತರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಆರೋಪಿಗಳಾದ ಸುದೀಪ್ ಮತ್ತು ಕಿರಣ್ ಕಾಲಿಗೆ ಗುಂಡು ತಗುಲಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಈ ಒಂದು ಕಾರ್ಯಾಚರಣೆಯಲ್ಲಿ ಅಶೋಕ್ ನಗರ ಪಿಎಸ್ಐ ಮಂಜುನಾಥ್, ವಿದ್ಯಾನಗರ ಪಿಎಸ್ಐ ಸಾತನ್ನವರ, ಸೇರಿ ಆರು ಜನ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಕಿಮ್ಸ್ ಆಸ್ಪತ್ರೆಗೆ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಹಲ್ಲೆಗೆ ಒಳಗಾದ ಪೋಲಿಸ್ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದ್ದಾರೆ.
ಘಟನೆಯ ಬಗ್ಗೆ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ ಮಾಧ್ಯಮಕ್ಕೆ ಪ್ರತಿಕ್ರಿಯೆ.
ಇದೊಂದು ಪೂರ್ವನಿಯೋಜಿತ ಕೊಲೆಯಾಗಿದೆ ಎಂದು ಪೋಲಿಸ ಕಮಿಷನರ್ ಹೇಳಿದ್ದಾರೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಇಬ್ಬರು ಜನರನ್ನು ವಶಕ್ಕೆ ಪಡೆಯಲಾಗಿದೆ, ಇನ್ನು ಎರಡು ಜನರಾದ ಕಾರ್ತಿಕ್ ಹಾಗೂ ಅಭಿಷೇಕ್ ಜಾಧವ್ ತಲೆಮರೆಸಿಕೊಂಡಿದ್ದಾರೆ, ಇವರು ಜೊತೆಗೆ ಇನ್ನೂ ಕೆಲವರು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ, ಇನ್ನು ಕೊಲೆಗೆ ನಿಖರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಬರ್ಬರವಾಗಿ ಕೊಲೆಯಾದ ಶಿವು ಕಮ್ಮಾರ ತಾಯಿ, ಲಕ್ಷ್ಮೀ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ.
ಇನ್ನು ಕೊಲೆಯಾದ ಶಿವು ಕಮ್ಮಾರ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯಲ್ಲಿ ಊಟ ಮಾಡಿದ ನಂತರ ಮಗನಿಗೆ ಮಲಗಲು ತಾಯಿ ಲಕ್ಷ್ಮೀ ಯವರು ಹೇಳಿದ್ದಾರೆ, ಆಗ ಸಲ್ಪ ಹೊರಗಡೆ ಹೋಗಿ ಬರುತ್ತೇನೆಂದು ಹೋದ ಶಿವು ಶವವಾಗಿ ಪತ್ತೆಯಾಗಿದ್ದಾನೆ.
ಕೊಲೆಯಾದ ಶಿವು ಕಮ್ಮಾರ ಗೆಳೆಯ ಮಾಧ್ಯಮಕ್ಕೆ ಹೇಳಿದ್ದಿಷ್ಟು.
ಕೊಲೆಯಾದ ಶಿವು ಕಮ್ಮಾರ ಸ್ನೇಹಿತ ಮಾಧ್ಯಮಕ್ಕೆ ಮಾತನಾಡಿ, ಕೆಲವ ದಿನಗಳ ಹಿಂದೆ ಕ್ಷುಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು ಆಗ ಇಬ್ಬರಿಗೂ ತಿಳುವಳಿಕೆ ಹೇಳಿ ಕಳಿಸಲಾಗಿತ್ತು, ಮಾರನೇದಿನ ದೇವರಿಗೆ ಬ್ಯಾಟಿ ಮಾಡಿ ಊಟ ಮಾಡಿಕೊಂಡು ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದೆವು, ಮನೆಗೆ ಹೋಗುತ್ತಿದ್ದಂತೆ ಮರ್ಡರ್ ಆಗಿದೆ ಅಂತ ಫೋನ್ ಬಂದಿದೆ, ಯಾರದೋ ಮರ್ಡರ್ ಆಗಿರಬಹುದು ಅಂತ ತಿಳಿದುಕೊಂಡಿದ್ದೆ, ನೋಡಿದರೆ ಶಿವುನನ್ನೇ ಮರ್ಡರ್ ಮಾಡಿದ್ದಾರೆ, 44 ಕಡೆ ಚಾಕು ಇರಿದು ಕೊಲೆ ಮಾಡಿದ್ದಾರೆಂಬ ವಿಷಯ ತಿಳಿಯಿತು, ಇಬ್ಬರು ಕೂಡ ಕ್ಲಾಸ್ ಮೇಟ್ಸ್, ಹೊರಗಿನಿಂದ ಬಂದ ಎರಡು ಜನ ಸೇರಿ ಈ ಕೊಲೆ ಮಾಡಿದ್ದಾರೆಂದು ಹೇಳಿದ್ದಾನೆ.
ಏನೆ ಆಗಲಿ ಶಾಂತವಾಗಿದ್ದ ಅವಳಿ ನಗರದಲ್ಲಿ ಮತ್ತೆ ರಕ್ತ ಹರಿದಿದ್ದು ಸಾರ್ವಜನಿಕರಲ್ಲಿ ಬಯದ ವಾತಾವರಣ ಸೃಷ್ಟಿಯಾಗಿದಂತೂ ಸತ್ಯ.