ಧಾರವಾಡ: ಹುಬ್ಬಳ್ಳಿಯಲ್ಲಿ ಕಾರೊಂದು ಬೆಂಕಿಗೆ ಆಹುತಿಯಾದಂತೆ ಧಾರವಾಡದಲ್ಲಿ ಮತ್ತೊಂದು ದುರಂತ ನಡೆದಿದೆ. ಐ20 ಕಾರು ನೋಡ ನೋಡುತ್ತಲೇ ಧಗಧಗಿಸಿ ಹೊತ್ತಿ ಉರಿದಿದೆ.
ಧಾರವಾಡದ ಸತ್ತೂರು ಬಳಿ ಈ ವೊಂದು ಘಟನೆ ನಡೆದಿದ್ದು, ರಾಕೇಶ್ ಹರಿಹರ ಎಂಬಾತರು ಹುಬ್ಬಳ್ಳಿಯಿಂದ ಧಾರವಾಡಗೆ ಹೊರಟಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಮೊದಲು ಕಾರಿನಲ್ಲಿ ಹೊಗೆ ಕಾಣಸಿಕೊಂಡಿತು. ತದನಂತರ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಲೇ ಕಾರು ಬೆಂಕಿಗೆ ಬಹುತೇಕ ಸುಟ್ಟು ಕರಕಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದು, ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.