ಸೂರ್ಯ ಕಣ್ಣು ತೆಗೆಯುವಷ್ಟರಲ್ಲೇ ಎರೆಡು ಜನ ಶಾಶ್ವತವಾಗಿ ಕಣ್ಣುಮುಚ್ಚಿದ ಘಟನೆ ಧಾರವಾಡದ ಸಂಪಿಗೆ ನಗರದಲ್ಲಿ ನಸುಕಿನ ಜಾವ ನಡೆದಿದೆ.
ಟ್ರಕ್ ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿ ಆಟೋದಲ್ಲಿ ದ್ದ ಎರೆಡು ಜನ ದಾರುಣವಾಗಿ ಸಾವನ್ನಪ್ಪಿದ ಘಟನೆ ಕಾಂಗ್ರೆಸ್ ಶಾಸಕ ಎನ್ ಎಚ್ ಕೋನರೆಡ್ಡಿ ಅವರ ನಿವಾಸದ ಬಳಿ ನಡೆದಿದೆ.
ಮೃತಪಟ್ಟವರ ಮಾಹಿತಿ ಪೊಲೀಸರ ತನಿಖೆಯ ನಂತರ ತಿಳಿದು ಬರಬೇಕಿದ್ದು, ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆಯ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.