ಹುಬ್ಬಳ್ಳಿಯ ಸಾವಿನ ಹೆದ್ದಾರಿಯಲ್ಲಿ ಮತ್ತೆರಡು ಬಲಿಯಾಗಿವೆ. ಹೌದು, ಬೈಕ್‌ಗೆ ಟವೇರಾ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಪೂನಾ-ಬೆಂಗಳೂರು ಬೈಪಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಇಲ್ಲಿಯ ಧಾರಾವತಿ ಹನುಮಂತನ ಗುಡಿಯ ಹತ್ತಿರ ಈ ಅಪಘಾತ ಸಂಭವಿಸಿದ್ದು ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ ಹಿಂಬದಿ ಸವಾರ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಾವಿಗೀಡಾದವರ ಮಾಹಿತಿ ಪೊಲೀಸರ ತನಿಖೆಯ ನಂತರ ತಿಳಿದು ಬರಬೇಕಿದೆ.
ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.