ಹುಬ್ಬಳ್ಳಿ: ಸೌಥ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಎಸ್.ಡಬ್ಲೂ ಆರ್.ಎಂ.ಯು ಚುನಾವಣಾ ಪ್ರಚಾರದ ಬೃಹತ್ ಮೆರವಣಿಗೆಯು ನಗರದ ರೈಲ್ವೆ ಸೌಧದ ಬಳಿಯಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಜರುಗಿತು.
ನಗರದ ರೈಲೈ ವಿಭಾಗೀಯ ಕಛೇರಿಯಿಂದ ರೈಲ್ವೆ ಸೌಧದ ವರೆಗೂ ಬ್ಯಾಂಡ್ ಬಾಜಾದೊಂದಿಗೆ ಬೃಹತ್ ರ‍್ಯಾಲಿ ನಡೆಸಿ ನಂತರ ರೈಲ್ವೆ ಸೌಧದಲ್ಲಿ ಎಸ್.ಡಬ್ಲೂ.ಆರ್.ಎಂ.ಯು ನ ಪ್ರಧಾನ ಕಾರ್ಯದರ್ಶಿ ಕೆ.ವಿ.ರಾಘವೇಂದ್ರ ಅವರು ನಾಮಪತ್ರ ಸಲ್ಲಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಕ್ಟೋಬರ್ 18 ರಂದು ಈಗಾಗಲೇ ಒಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮಜ್ದೂರ ಯುನಿಯನ್ ಒಂದೇ, ಕಾರ್ಮಿಕರು ಒಂದೇ ಆದರೆ ನಾಯಕತ್ವದಲ್ಲಿ ಗೊಂದಲವಿದೆ ಹೊರತು ಯೂನಿಯನ್ ದಲ್ಲಿ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ನಾಯಕತ್ವ ಬದಲಾವಣೆಯಾಗಬೇಕಿದೆ ಎಂದರು.
ನ್ಯಾಯಾಲಯದ ಮಧ್ಯವರ್ತಿಕೆಯಿಂದ ಸಭೆ ಮುಂದುಡಲ್ಪಟ್ಟದ್ದರಿಂದ ಅದೇ ಉಚ್ಛ ನ್ಯಾಯಾಲಯ ಅನುಮತಿ ನೀಡಿ ಹಚ್ಚಿನ ಸಂಖ್ಯೆ ಇರೋದ್ರಿಂದ ನಾಮಪತ್ರ ಸಲ್ಲಿಕೆ ಮಜ್ದೂರ ಯುನಿಯನ್ ಪರವಾಗಿ ಉಚ್ಛ ನ್ಯಾಯಾಲಯ ಆದೇಶ ಕೊಟ್ಟಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯದ ತೀರ್ಪಿನ ಬಗ್ಗೆ ಮಜ್ದೂರ ಯುನಿಯನ್ ನಾಮಪತ್ರ ಪ್ರದರ್ಶನ ಮಾಡಿ ಸೌಥ್ ವೆಸ್ಟ ರೈಲ್ವೆ ವತಿಯಿಂದ ಪ್ರತಿಯೊಂದು ಶಾಖೆಯಿಂದ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಕಾರ್ಯಾಗಾರ ಎಲ್ಲಾ ಕಡೆಯಿಂದ ಐದು ಸಾವಿರಕ್ಕಿಂತ ಹೆಚ್ಚು ಜನ ಬೆಂಬಲ ಸೂಚಿಸಿದ್ದಾರೆ.
ಈ ಮೂಲಕ ನಮಗೆ ಸಂಪೂರ್ಣವಾಗಿ ನಂಬಿಕೆಯಿದೆ ಈ ಬಾರಿಯೂ ಕೂಡಾ ನವೆಂಬರ್ 4,5 ಹಾಗೂ 6 ರಂದು ನಡೆಯುವ ಚುನಾವಣೆಯಲ್ಲಿ ನಮ್ಮ ಮಜ್ದೂರ ಯುನಿಯನ್ ಏಕೈಕ ಯೂನಿಯನ್ ಆಗಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಯೂನಿಯನ್ ವಿಭಾಗದ ಪದಾಧಿಕಾರಿಗಳು ಆರ್ ಕುಮಾರ್ ವೇಲನ್, ಜಾಕಿರ್ ಸನದಿ, ಮೈಸೂರ್ ವಿಭಾಗದವರಾದ ನಾಗೇಂದ್ರನ್, ಎಲ್ ಎಸ್ ವೆಂಕಟೇಶ ಮತ್ತು ಮೈಸೂರ್ ಕಾರ್ಯಾಗಾರ ವಿಭಾಗದ ಎಂ ಯತಿರಾಜು ಮತ್ತು ಕೆ ಮಂಜುನಾಥ್ ಅವರು ಉಪಸ್ಥಿತರಿದ್ದರು.