ಹುಬ್ಬಳ್ಳಿ : ಹುಚ್ಚು ಹಿಡಿದ ಸಾಕು ನಾಯಿಯಿಂದ ಸಾರ್ವಜನಿಕರ ಮೇಲೆ ಮಾರಣಾಂತಿಕ ದಾಳಿ ನಡೆದ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಮಾರುತಿ ನಗರದಲ್ಲಿ ನಡೆದಿದೆ.
ಸಾಕು ನಾಯಿಯಿಂದ 30 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಲಾಗಿದ್ದು ಈವರೆಗೂ ಒಟ್ಟು 16 ಕ್ಕೂ ಹೆಚ್ಚು ಜನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
30ಕ್ಕೂ ಹೆಚ್ಚು ಜನರ ಮೇಲೆ ಮಾರಣಾಂತಿಕ ದಾಳಿ ನಡಿಸಿರೋ ನಾಯಿ ಮಕ್ಕಳು, ಹಿರಿಯರು, ಯುವಕರು, ಮಹಿಳೆಯರು ಮೇಲೆ ದಾಳಿ ಮಾಡಿದೆ.
ನಾಯಿಗೆ ಹುಚ್ಚು ಹಿಡಿದ ಹಿನ್ನೆಲೆ ನಾಯಿಯನ್ನು ಬೀದಿಗೆ ಬಿಟ್ಟಿರೋ ಶಂಕೆ ವ್ಯಕ್ತವಾಗಿದ್ದು, ಕೊರಳಲ್ಲಿ ಚೈನ್ ಸಮೇತ ಬೀದಿಯಲ್ಲಿ ತಿರುಗಾಡುತ್ತಿದ್ದ ನಾಯಿ ದಾಳಿಯನ್ನು ಮಾಡಿದೆ.
ಸದ್ಯ ಹುಚ್ಚು ಹಿಡಿದ ನಾಯಿಯನ್ನು ಪಾಲಿಕೆ ಸಿಬ್ಬಂದಿಗಳು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.