ಹುಬ್ಬಳ್ಳಿ: ಬೈಕ್ ಸ್ಕಿಡ್ ಆಗಿ ಬಿದ್ದು, ಸ್ಥಳದಲ್ಲಿಯೇ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ನವನಗರ ಆರ್ ಟಿ ಓ ಬಳಿ ತಡ ರಾತ್ರಿ ನಡೆದಿದೆ. ಮಂಜುನಾಥ್ ಕೃಷ್ಣ ಶಿಂದೆ ಮೃತಪಟ್ಟ ಯುವಕ. ಧಾರವಾಡ ಮಾಳಾಪುರ ಹಾಷ್ಮಿ ನಗರ ನಿವಾಸಿ ಎಂದು ಗುರುತಿಸಲಾಗಿದೆ.
ಮೃತನು, ಹುಬ್ಬಳ್ಳಿಯಿಂದ ಧಾರವಾಡ ಕಡೆ ಬೈಕ್‌ನಲ್ಲಿ ತನ್ನ ಸ್ನೇಹಿತನ ಜೊತೆಗೆ ತೆರಳುತ್ತಿದ್ದನು, ಬೈಕ್ ಸ್ಕಿಡ್ ಆಗಿ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಬೈಕ್ ಚಲಿಸುತ್ತಿದ್ದ ಸವಾರನ ಕಾಲ ಮುರಿದಿದ್ದು ಚಿಕಿತ್ಸೆಗಾಗಿ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.