ಹುಬ್ಬಳ್ಳಿ: ನಗರದ ಹೊರವಲಯದ ಮನೆಯನ್ನು ಟಾರ್ಗೆಟ್ ಮಾಡಿ ಮಳೆಗಳ್ಳತನ ಮಾಡಿರುವ ಘಟನೆ ಶರಹ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಬುದ್ದ ವಿಹಾರ ಪ್ಲಾಟ್\’ನಲ್ಲಿ ಈ ಕಳ್ಳತನ ನಡೆದಿದ್ದು, ಕಳ್ಳನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಾಜು ಮೈಕೇಲ್ ಎನ್ನುವವರಿಗೆ ಸೇರಿರುವ ಮನೆಯಲ್ಲಿಯೇ ಕಳ್ಳತನವಾಗಿದ್ದು, ಮನೆಯಲ್ಲಿನ ಬಾಂಡೆ ಸೇರಿದಂತೆ ಇನ್ನಿತರ ವಸ್ತುಗಳು ಕಳ್ಳತನವಾಗಿವೆ.
ಇನ್ನೂ ಇದೇ ಮನೆಯನ್ನು ಈ ಹಿಂದೆಯೂ ಕಳ್ಳತನ ಮಾಡಲು ಪ್ರಯತ್ನಿಸಲಾಗಿತ್ತು. ಈ ಕುರಿತು ಶರಹ ಪೊಲೀಸ್ ವ್ಯಾಪ್ತಿ ಠಾಣೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.