ಹುಬ್ಬಳ್ಳಿ: ಬಾಲ್ಯ ವಿವಾಹವನ್ನು ತಡೆಗಟ್ಟಲು, ಕೇಂದ್ರ ಸರ್ಕಾರ ಹುಡುಗಿಗೆ 19 ವಯಸ್ಸು, ಹುಡುಗನಿಗೆ 21 ವಯಸ್ಸು ಕಡ್ಡಾಯವಾಗಿರಬೇಕೆಂದು ಹೇಳಿದೆ. ಆದ್ರೆ ಉಪ ನೊಂದಣಾಧಿಕಾರಿಯೊಬ್ಬರು ಹುಡುಗನಿಗೆ ವಯಸ್ಸು ಕಡಿಮೆ ಇದ್ರು ಮ್ಯಾರೇಜ್ ರಿಜಿಸ್ಟರ್ ಮಾಡಿ ಕೊಟ್ಟು, ಎಡವಟ್ಟು ಮಾಡಿದ್ದಾರೆ.
ಹೌದು,,,, ಹುಬ್ಬಳ್ಳಿಯ ವಿದ್ಯಾನಗರ ನೇಕಾರ ಕಾಲೋನಿಯಲ್ಲಿರುವ ಉಪ ನೊಂದಣಾಧಿಕಾರಿ ಕೆ.ಎಸ್ ಹಂಚನಾಳ, ಹುಡುಗನಿಗೆ ವಯಸ್ಸು ಕಡಿಮೆ ಇದ್ರು ಮದುವೆ ನೊಂದಣಿ ಮಾಡಿ ಎಡವಟ್ಟು ಮಾಡಿದ್ದಾರೆ. ಸಧ್ಯ ಇವರ ಮೇಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 19/06 /2024 ರಂದು ವಿದ್ಯಾನಗರ ಉಪ ನೊಂದಣಿ ಕಚೇರಿಯಲ್ಲಿ ಒಂದು ಮದುವೆ ನೋಂದಣಿ ಮಾಡಿರುತ್ತಾರೆ. ಆದ್ರೆ ಅಂದಿನ ದಿನಕ್ಕೆ ನೋಡಿದ್ರೆ ಹುಡುಗಿಗೆ 20 ವಯಸ್ಸು ಆಗಿರುತ್ತೆ, ಆದ್ರೆ ಹುಡುಗನಿಗೆ 20 ವರ್ಷ 10 ತಿಂಗಳು ಆಗಿರುತ್ತೆ. ಇದನ್ನು ಗಮನಿಸದೇ ಉಪ ನೊಂದಣಾಧಿಕಾರಿ ಮದುವೆ ನೋಂದಣಿ ಮಾಡಿದ್ದಾರೆ. ಇದನ್ನು ಕಂಡ ಹುಡುಗಿಯ ಸಂಬಂಧಿಕರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಉಪ ನೋಂದಣಾಧಿಕಾರಿ ಕೆ.ಎಸ್ ಹಂಚಿನಾಳ ವಿರುದ್ದ ಮತ್ತು ಸಹಿ ಮಾಡಿದ ನಾಲ್ಕು ಜನರ ಮೇಲೆ ದೂರು ದಾಖಲಿಸಿದ್ದಾರೆ.
ಆದ್ರೆ ಉಪನೋಂದಣಾಧಿಕಾರಿ ವಿರುದ್ಧ ದೂರು ದಾಖಲಾಗಿದ್ದರೂ ಇದುವರೆಗೂ ಪೊಲೀಸ್ ಇಲಾಖೆ ಈ ಅಧಿಕಾರಿ ಮೇಲೆ ಕ್ರಮಕೈಗೊಳ್ಳದೇ ಇರೋದು ಹಲವು ಅನುಮಾನಕ್ಕೆ ಎಡೆಮಾಡಿದೆ. ಕಳೆದ ಜೂನ್ 19 ರಂದೇ ಸಬ್ ರೆಜಿಸ್ಟ್ರಾರ್ ಹಂಚಿನಾಳ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಪ್ರಾಪ್ತ ವಯಸ್ಕರಿಗೆ ವಿವಾಹ ನೋಂದಣಿ ಮಾಡಿಸಿರೋ ವಿಚಾರಕ್ಕೆ ದೂರು ದಾಖಲಾಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಅಪ್ರಾಪ್ತರಿಗೆ ವಿವಾಹ ಮಾಡಿಸಿದವರನ್ನ ಬಂಧನ ಮಾಡದಿರುವುದು ಪೊಲೀಸ್ ಇಲಾಖೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.