ಹುಬ್ಬಳ್ಳಿ : ಚಿಗರಿ (ಬಿ.ಆರ್.ಟಿ.ಎಸ್) ಬಸ್ ವೊಂದು ವೇಗವಾಗಿ ಬಂದು ಜೆಸಿಬಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದೃಷ್ಟವಶಾತ್ ಅನಾಹುತ ತಪ್ಪಿದ ಘಟನೆ ನಗರದ ಬೈರಿದೇವರಕೊಪ್ಪದ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಅಪಘಾತದ ಸಂದರ್ಭದಲ್ಲಿ ಚಿಗರಿ ಬಸ್ ನ ಮುಂಭಾಗ ಜಖಂಗೊಂಡರೇ ಇತ್ತ ಜೆಸಿಬಿ ವಾಹನದ ಕೆಲ ಭಾಗ ಕೂಡಾ ಜಖಂಗೊಂಡಿದೆ. ಬಸ್ ನಲ್ಲಿ ಹಾಗೂ ಜೆಸಿಬಿ ವಾಹನದಲ್ಲಿದ್ದವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಸದಾ ಸುದ್ದಿಯಲ್ಲಿರುವ ಚಿಗರಿ ವೇಗದ ಅವಾಂತರದಿಂದ ಆಕ್ರೋಶಗೊಂಡು ರಸ್ತೆ ತಡೆ ನಡೆಸಿದರು.
ಬಳಿಕ ಘಟನಾ ಸ್ಥಳಕ್ಕೆ ನವನಗರ ಠಾಣೆಯ ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡದ ಜನತೆಗೆ ಆರಾಮದಾಯಕ ಪ್ರಯಾಣ ಕಲ್ಪಿಸುವ ನಿಟ್ಟಿನಲ್ಲಿ \’ಚಿಗರಿ\’ ಮೆರಗು ಹೆಚ್ಚಿಸಿದೆ. ಆದರೇ ಚಿಗರಿ ಬಸ್‌ನ ಅತಿ ವೇಗ ಸಾರ್ವಜನಿಕರನ್ನು ಮರಗುವಂತೆ ಮಾಡಿದ್ದು, ಸಂಬಂಧಿಸಿದ ಅಧಿಕಾರಿಗಳು \’ಚಿಗರಿ\’ ವೇಗಕ್ಕೆ ಬ್ರೇಕ್ ಹಾಕಿ ಅಪಘಾತಗಳ ಅವಾಂತರ ತಡೆಯಬೇಕಿದೆ ಎಂಬುದೇ ಸಾರ್ವಜನಿಕರು ಹಾಗೂ \’ಕರ್ನಾಟಕ ಪಬ್ಲಿಕ್ ವಾಯ್ಸ್\’ ವಾಹಿನಿಯ ಆಶಯವಾಗಿದೆ.