ಹುಬ್ಬಳ್ಳಿ: ಅಂಜುಮನ್ ಸಂಸ್ಥೆಯ ಸದಸ್ಯ ಮಹಮ್ಮದ್ ದಾವೂದ್ ಅಲಿಯಾಸ್ MD ಮೇಲೆ ಗುರುವಾರ ನಡೆದ ಘಟನೆಗೆ ಹಳೆಯ ವೈಷಮ್ಯವೇ ಕಾರಣ ಆಯ್ತಾ? ಇಲ್ಲಾ ಇಸ್ಪೀಟು ಜೂಜಾಟವೇ ಮುಳುವಾಯಿತಾ? ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಹೌದು, ಮಹಮ್ಮದ್ ದಾವೂದ್ ರೌಡಿಸಂ ಬಿಟ್ಟು ರಾಜಕಾರಣದಲ್ಲಿದ್ದರು ಸಹ ಆತನ ಮೇಲೆ ಖಾರದ ಪುಡಿ ಎರಚಿ, ತಲ್ವಾರ್ ಬೀಸುವಂತಹ ಸಿಟ್ಟು ಯಾಕೆ? ಅಂತಹ ಕೃತ್ಯವನ್ನು ಮಹಮ್ಮದ್ ಏನೂ ಮಾಡಿದ್ದಾನೆ? ಎಂದು ಪ್ರಶ್ನೆ ಮಾಡಿದ್ದರೇ, ಇಮ್ತಿಯಾಜ್ ಅಲಿಯಾಸ್ \”ಕಾರ್ತೂಸ್\” ಹತ್ಯೆಯೇ ಮಹಮ್ಮದ್ ಜೀವಕ್ಕೆ ಆಪತ್ತು ತಂದಿತಾ? ಎಂದು ಹೇಳಲಾಗುತ್ತಿದೆ.
ಇಲ್ಲಾ ಇಸ್ಪೀಟ್ ಜೂಜಾಟದ ಆಟವೇ ಕುತ್ತಾಯಿತಾ? ಸದ್ಯ ಈ ಕುರಿತು ಹುಬ್ಬಳ್ಳಿಯ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸ್ ತನಿಖೆಯಿಂದಲೇ ಇನ್ನಷ್ಟೇ ನಿಖರ ಮಾಹಿತಿ ದೊರೆಯಬೇಕಿದೆ.
ಸದ್ಯ ಕೆಲ ಆರೋಪಿಗಳನ್ನು ಬಂಧಿಸಿರುವ ಪೋಲಿಸರು ಕೊಲೆ ಯತ್ನಕ್ಕೆ ಕಾರಣ ಏನೂ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.