ಹುಬ್ಬಳ್ಳಿ: ಅಂಜುಮನ್ ಸಂಸ್ಥೆಯ ಸದಸ್ಯ ಮಹಮ್ಮದ್ ದಾವೂದ್ ಮೇಲಿನ ಅಟ್ಯಾಕ್\’ಗೆ ಪೋಲಿಸ್ ತನಿಖೆ ಬಳಿಕ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ಇದೀಗ ದಾವೂದ್ ಕೊಲೆಯತ್ನದ ಹಿಂದೆ ಹಳೆಯ ವೈಷಮ್ಯ ಕಾರಣವಿರುವುದು ಎಷ್ಟು ಸತ್ಯವಿದೆಯೋ ಅಷ್ಟೇ ದಾವೂದ್ ನಡೆಯಿಂದ ಬೇಸತ್ತ ಹುಬ್ಬಳ್ಳಿಯ ವಿವಿಧ ರೌಢಿಜಂ ಗ್ಯಾಂಗ್\’ಗಳು ಹೇಗಾದರೂ ಮಾಡಿ ದಾವೂದ್\’ನನ್ನು ಇಲ್ಲವಾಗಿಸಬೇಕೆಂದು ಸಂಚು ರೂಪಿಸಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಹೌದು, ಮಹಮ್ಮದ್ ದಾವೂದ್ ಅಲಿಯಾಸ್ MD ವೈಟ್ ಹಾಕುವ (ರಾಜಕಾರಣಕ್ಕೆ) ಮುಂಚೆ ರೌಢಿಜಂನಲ್ಲಿ ಪಳಗಿದ್ದ, ಈ ವೇಳೆ ಕೊಲೆ ಎಸಗಿದ್ದ ಅದರಲ್ಲಿ ಇಮ್ತಿಯಾಜ್ ಅಲಿಯಾಸ್ ಕಾರ್ತೂಸ್\’ನನ್ನು ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರ್ಬರ್\’ವಾಗಿ ಹತ್ಯೆ ಮಾಡಿದ್ದ. ಈ ಹತ್ಯೆ ಪ್ರಕರಣ ಇನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಆ ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ದಾವೂದ್ ರೌಢಿಜಂ ಜತೆಗೆ ರಾಜಕಾರಣಕ್ಕೂ ಹೆಜ್ಜೆ ಹಾಕತ್ತಾನೆ. ಅದೇನೋ ಗೊತ್ತಿಲ್ಲ, ಮುಟ್ಟಿದೆಲ್ಲ ಚಿನ್ನ ಎನ್ನುವಂತೆ ಮಹಮ್ಮದ್ ದಾವೂದ್ ಬಹುಬೇಗ ಹಣ, ಆಸ್ತಿ, ಹೆಸರು ಗಳಿಸತ್ತಾನೆ. ಇತ್ತಿಚೆಗೆ ಪ್ರತಿಷ್ಠಿತ ಅಂಜುಮನ್ ಸಂಸ್ಥೆಯ ಚುನಾವಣೆ ಗೆದ್ದು, ಆರೋಗ್ಯ ಸಮಿತಿಯಲ್ಲಿ ಸದಸ್ಯನಾಗಿದ್ದಾನೆ.
ಈ ನಡುವೆಯೂ ದಾವೂದ್ ಎಲ್ಲ ಕ್ಷೇತ್ರದಲ್ಲಿ ಹಿಡಿತ ಸಾಧಿಸುತ್ತಾ ಇರೋದನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯ ಇತರ ರೌಢಿ ಗ್ಯಾಂಗ್\’ಗಳಿಗೆ ತಲೆ ನೋವಾಗಿತ್ತು. ಕೆಲವು ತಂಟೆ ತಕರಾರುಗಳು ಎಲ್ಲ ಸೇರಿ ಕಳೆದ ಹಲವಾರು ದಿನಗಳಿಂದಲೇ ಹೇಗಾದರೂ ಮಾಡಿ ಮಹಮ್ಮದ್ ದಾವೂದ್\’ನನ್ನು ಪರಲೋಕಕ್ಕೆ ಕಳಿಸಬೇಕೆಂದು ಸ್ಕೇಚ್ ಹಾಕಿ, ಮೊನ್ನೆ ನಡೆದ ಅಟ್ಯಾಕ್ ಬಿಟ್ಟು, ಈ ಹಿಂದೆಯೂ ಕೊಲೆಯತ್ನ ನಡೆದಿವೆ ಎಂಬ ಸ್ಫೋಟಕ ಮಾಹಿತಿ ಕರ್ನಾಟಕ ಪಬ್ಲಿಕ್ ವಾಯ್ಸ್\’ಗೆ ಲಭ್ಯವಾಗಿದೆ.
ಆದರೆ ದಾವೂದ್ ಹಣೆಬರಹ ಗಟ್ಟಿ ಅನಿಸುತ್ತೆ ಹೀಗಾಗಿಯೇ ಕೊಲೆಗೆ ಯತ್ನ ನಡೆದರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದೀಗ ಮೊನ್ನೆ ನಡೆದ ಅಟ್ಯಾಕ್ ಕುರಿತಂತೆ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸ್ ತನಿಖೆಯಿಂದ ಇನ್ನಷ್ಟೇ ನಿಖರ ಮಾಹಿತಿ ದೊರೆಯಬೇಕಿದೆ.
ಇಂಚ ಇಂಚು ಮಾಹಿತಿ ಮುಂದಿನ ಸಂಚಿಕೆಯಲ್ಲಿ…. ವೇಟ್ ಮಾಡಿ…..