ಹುಬ್ಬಳ್ಳಿ: ನಗರ ಸಿಇಎನ್ ಪೊಲೀಸರು (poppy straw)ಪೊಪ್ಪೆ ಸ್ಟ್ರಾ ಎಂಬ ಮಾದಕ ವಸ್ತು ಡ್ರಗ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಕಾಳಮ್ಮನ ಅಗಸಿ ಬಳಿಯಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾದಕ ವಸ್ತುವಾದ \”ಪೊಪ್ಪೆ ಸ್ಟ್ರಾ\” ಮಾರಾಟ ಮಾಡುತ್ತಿದ್ದ ಶರವಣ್ ಗಿರಿ ಮತ್ತು ಲಿಹರ್ ಗಿರಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 544 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನು ಕಾರ್ಯಾಚರಣೆಯಲ್ಲಿ ಸಿಇಎನ್ ಕ್ರೈಂ ಠಾಣೆಯ ಎಸಿಪಿ ಶಿವರಾಜ್ ಕೆ ಕಟಕಭಾವಿ ಹಾಗೂ ಇನ್ಸ್ಪೆಕ್ಟರ್ ಬಿ ಕೆ ಪಾಟೀಲ್ ನೇತೃತ್ವದ ತಂಡದಲ್ಲಿ ಪಿಎಸ್ಐ ರಮೇಶ್ ಪಾಟೀಲ್ ಸಿಬ್ಬಂದಿಗಳಾದ ಸಿ ಎಂ ಕಂಬಾಳಿಮಠ, ಭೀಮು ಸಾಸನೂರ, ಶಿವಾನಂದ್ ಮಾನಕರ್, ಗಿರೀಶ್ ಬಡಿಗೇರ, ಫಕ್ಕೀರೇಶ್ ಸುಣಗಾರ, ಆರ್ ಎನ್ ಕೋಳಿ ಹಾಗೂ ಓಬಳೇಶ್ ಕೌಲಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಇವರ ಕಾರ್ಯವೈಖರಿಯನ್ನು ಪೊಲೀಸ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.