ಹುಬ್ಬಳ್ಳಿ: ಪತ್ರಕರ್ತ ಗುರುರಾಜ ಹೂಗಾರ ಅವರ ಪತ್ನಿ ಇಲ್ಲಿನ ಫಾರೆಸ್ಟ್ ಕಾಲೋನಿ ನಿವಾಸಿ ಪ್ರೇಮಾ ಗುರುರಾಜ ಹೂಗಾರ(54) ಮಂಗಳವಾರ ನಿಧನರಾದರು.
ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.
ಪ್ರೇಮಾ ಹೂಗಾರ ಅವರು ಇಂದು ಮುಂಜಾನೆ ಹಾಗೂ ಸಂಜೆ ಮಾಧ್ಯಮ ಪತ್ರಿಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಪ್ರೇಮಾ ಹೂಗಾರ ನಿಧನಕ್ಕೆ ಹೂಗಾರ ವಿವಿಧೊದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.