ವಿದ್ಯಾರ್ಥಿನಿಯೊಬ್ಬಳು ಕಳೆದುಕೊಂಡ ಮೊಬೈಲ್ ಟ್ಯಾಬನ್ನು ಪೊಲೀಸರು ಒಂದು ಗಂಟೆಯಲ್ಲಿ ಹುಡುಕಿದ್ದಾರೆ.
ಕಲಘಟಗಿ ತಾಲೂಕಿನ ನಂದಿತಾ ಅನ್ನೋ ವಿದ್ಯಾರ್ಥಿನಿ ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿ ಮಾರ್ಕೆಟ್ ಮಾಡಲು ಬಂದಾಗ ತನ್ನ ಹತ್ತಿರವಿದ್ದ 60 ಸಾವಿರ ಕಿಮ್ಮತ್ತಿನ ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಟ್ಯಾಬ್ ಕಳೆದುಕೊಂಡಿದ್ದಾಳೆ.
ತಕ್ಷಣ ಅವರು ಶಹರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಕಾರ್ಯ ಪ್ರವೃತ್ತರಾದ ಸಿಪಿಐ ರಫೀಕ್ ತಹಶೀಲ್ದಾರ್ ಅವರ ಆದೇಶದ ಮೇರೆಗೆ ಪೋಲಿಸ್ ಸಿಬ್ಬಂದಿಗಳಾದ ರವಿರಾಜ ಕೆಂದೂರ, ಕನಕಪ್ಪ ರಗಣಿ, ಆಸ್ಮಾ ಕಾರಡಗಿ, ತಾಹೀನಾ ಬೇಗಂರವರು ತಕ್ಷಣ ಮೊಬೈಲ್ ನಂಬರ್ ಟ್ರೇಸ ಮಾಡಿ, ಮೊಬೈಲ್ ಟ್ಯಾಬ್ ಕಳೆದುಕೊಂಡ ಸ್ಥಳಕ್ಕೆ ಹೋಗಿ ಟ್ಯಾಬ್ ಪತ್ತೆ ಮಾಡಿ ವಿದ್ಯಾರ್ಥಿನಿಗೆ ಮರಳಿಸಿದ್ದಾರೆ.
ಟ್ಯಾಬ್ ಪಡೆದ ವಿದ್ಯಾರ್ಥಿನಿ ಮೊಗದಲ್ಲಿ ಮಂದಹಾಸ ತಂದ ಶಹರ ಪೋಲಿಸ್ ಠಾಣೆಯ ಸಿಬ್ಬಂದಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.