ಹುಬ್ಬಳ್ಳಿ: ನಿಲ್ದಾಣದಲ್ಲಿ ನಿಂತುಕೊಂಡಿದ್ದ BRTS ಬಸ್ ಗೆ ಎದುರಿಗೆ ಬಂದು ಬೈಕ್ ಡಿಕ್ಕಿ ಹೊಡಿಸಿದ ಘಟನೆ ಹುಬ್ಬಳ್ಳಿ ಧಾರವಾಡ ಮಧ್ಯ ನವನಗರ ದ ಚಿಗರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪ್ರತ್ಯೇಕವಾದ BRTS ಟ್ರ್ಯಾಕ್ ನಲ್ಲಿ ಸಾರ್ವಜನಿಕ ವಾಹನಗಳು ಪ್ರವೇಶ ನಿಷೇಧವಿದ್ದರೂ ಬೈಕ್ ನಲ್ಲಿ ಬಂದಿದ್ದ ಯುವಕ ತನ್ನ ಬೈಕ್ ಗೆ ಸೈಡ್ ಕೊಡಲಿಲ್ಲವೆಂದು ಸಿಟ್ಟಿಗೆದ್ದು ನಿಲ್ದಾಣದಲ್ಲಿ ನಿಂತಿದ್ದ ಬಸ್ ಮುಂಭಾಗಕ್ಕೆ ಬೈಕ್ ನಿಂದ ಡಿಕ್ಕಿ ಹೊಡೆಸಿದಲ್ಲದೆ ಚಾಲಕನಿಗೆ ಅಶ್ಲೀಲವಾಗಿ ಬೈದು ಪ್ರಯಾಣಿಕರಿಗೆ ಕಿರಿ ಕಿರಿ ಉಂಟು ಮಾಡಿ ಹುಚ್ಚಾಟ ಮೆರೆದಿದ್ದಾನೆ.
ಇನ್ನು ಬಸ್ ನಲ್ಲಿದ್ದ ಪ್ರಯಾಣಿಕರು ಹೇಳಿದರು ಸುಮ್ಮನಾಗದ ಯುವಕ ಬಸ್ಸಿಗೆ ಜಾಗ ನೀಡದೆ ತೊಂದರೆ ಉಂಟು ಮಾಡಿದ ದೃಶ್ಯಗಳು ಸಮಾಜಿಕ ಜಾಲ ತಾಣದಲ್ಲಿ ಹರದಾಡುತ್ತಿವೆ.
ಘಟನೆ ನಡೆದರು ಚಾಲಕರ ನೆರವಿಗೆ ಬಾರದ BRTS ಅಧಿಕಾರಿಗಳು, ಈ ತರಾ ಪದೇಪದೇ ಆಗುತ್ತಿದ್ದರೂ ಕೂಡಾ ಚಾಲಕರ ಬಗ್ಗೆ ಗಮನ ಹರಿಸುತ್ತಿಲ್ಲಾ ಎಂದು ಕೆಲ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.