ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯನ್ನು ಪುಸುಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ ಆರೋಪಿಯನ್ನು ಶಹರ ಠಾಣೆಯ ಪೊಲೀಸರು ಬಂಧಿಸಿ ಕಂಬಿ ಹಿಂದೆ ಅಟ್ಟಿದ್ದಾರೆ.
ಮಗಳು ಕಾಣೆಯಾಗಿರುವ ಬಗ್ಗೆ ಬಾಲಕಿಯ ಪೋಷಕರೂ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಶಹರ ಠಾಣೆಯ ಇನ್ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ಹಾಗೂ ಪಿಎಸ್ಐ ಮಾರುತಿ ಆರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಮರಾವ್ ರಾಥೋಡ್, ರವಿರಾಜ್ ಕೆಂದೂರ್, ಮಹಿಳಾ ಸಿಬ್ಬಂದಿ ಬಸಮ್ಮ ಛಲವಾದಿ ಅವರು ಕಾಣೆಯಾದ ಬಾಲಕಿಯ ಪತ್ತೆಗೆ ಮುಂದಾಗಿದ್ದಾರೆ.

ತನಿಖೆಯಲ್ಲಿ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದ ನಿವಾಸಿ ಟಿಪ್ಪು ಸುಲ್ತಾನ್ ಬೇಪಾರಿ ಕಾಣೆಯಾದ 16 ವರ್ಷದ ಬಾಲಕಿಯನ್ನು ಪುಸುಲಾಯಿಸಿ ಮದುವೆಯಾಗಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿರುವ ಸಂಗತಿ ಬೆಳಕಿಗೆ ಬಂದಿದೆ.
ಸದ್ಯ ಬಂಧಿತ ಆರೋಪಿಯ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿ ಬೆಳಗಾವಿ ಇಂಡಲಗಾ ಜೈಲಿಗೆ ಅಟ್ಟಿದ್ದಾರೆ.
ಇನ್ನು ಈ ಹಿಂದೆ ಕೂಡಾ ಆರೋಪಿ ಟಿಪ್ಪು ಸುಲ್ತಾನ್ ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ, ಈತನ ಮೇಲೆ ವಿವಿಧ ಪೋಲಿಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿರುವ ಸಂಗತಿಯು ಕೇಳಿಬಂದಿವೆ, ಇದೀಗ ಬುದ್ದಿ ಕಲಿಯದ ಟಿಪ್ಪು ಸುಲ್ತಾನ್ ಪುನಃ ಅದೇ ತಪ್ಪು ಮಾಡಿ ಕಂಬಿಗಳನ್ನು ಎನಿಸುತ್ತಿದ್ದಾನೆ.