ಹುಬ್ಬಳ್ಳಿ:
ನಗರದ ಕಾರವಾರ ರಸ್ತೆ ಬಳಿಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವ ಯುವಕನ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚಟ್ನಿ ಕಾಂಪ್ಲೆಕ್ಸ್ ಬಳಿಯಿರುವ ಮೈದಾನದಲ್ಲಿ ಈ ಯುವಕನ ಶವ ಪತ್ತೆಯಾಗಿದ್ದು, ಸಾವನ್ನಪ್ಪಿದ ಯುವಕ ಯಾರು? ಘಟನೆ ಏನು? ಯಾವಾಗ ಘಟನೆ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ.
ಘಟನೆ ಕುರಿತಂತೆ ಹಳೇ ಹುಬ್ಬಳ್ಳಿ ಪೊಲೀಸರು, ಘಟನೆಯ ಅಸಲಿಯತ್ತನ್ನು ಬೇಧಿಸಲು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ.