ಹುಬ್ಬಳ್ಳಿ: ಗಬ್ಬೂರ ಹೊರವಲಯದ ಪುಣಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್ ಗೂಡ್ಸ್ ವಾಹನವೊಂದು ನೀರಿನ ಟ್ಯಾಂಕರ್ ಮೇಲೆ ಹರಿದು, ಟ್ರ್ಯಾಕ್ಟರ್ ಚಾಲಕನಿಗೆ ಗಾಯಗಳಾದ ಘಟನೆ ಈಗಷ್ಟೇ ಜರುಗಿದೆ.
ಧಾರವಾಡ ಕಡೆಯಿಂದ ಗಬ್ಬೂರು ಕಡೆಗೆ ಹೊರಟ್ಟಿದ ನೀರಿನ ಟ್ಯಾಂಕರ್ ಟ್ರ್ಯಾಕ್ಟರ್\’ಗೆ ಕಂಟೇನರ್ ಬೃಹತ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಗುದಿದ್ದೆ, ಪರಿಣಾಮ ಟ್ರ್ಯಾಕ್ಟರ್ ಸಂಪೂರ್ಣವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇನ್ನು ಸ್ಥಳಕ್ಕೆ ದಕ್ಷಿಣ ಸಂಚಾರಿ ಪೋಲಿಸರು ಭೇಟಿ ನೀಡಿದ್ದು, ಗಾಯಗೊಂಡ ಟ್ರ್ಯಾಕ್ಟರ್ ಸವಾರನಿಗೆ ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿ, ಅಪಘಾತ ವಾಹನಗಳನ್ನು ತೆರವು ಮಾಡಿ, ವಾಹನ ಸಂಚಾರಕ್ಕೆ ಅನುವು ಕಲ್ಪಿಸಿದ್ದಾರೆ.