ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಭಾರತದ ಚುನಾವಣೆ ಆಯೋಗ ಹಾಗೂ ಸರ್ಕಾರದ ಆದೇಶದ ಮೇರೆಗೆ ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಬೆಳಗಾವಿ ವಲಯ ಮಟ್ಟದ 176 ಪಿಎಸ್ಐ ಅಧಿಕಾರಿಗಳನ್ನು ವಿವಿಧ ಜಿಲ್ಲೆ ತಾಲೂಕಿನ ನಡಿ ವರ್ಗಾವಣೆ ಮಾಡಿ ಆದೇಶ ಮಾಡಿದೆ.
ಹೌದು ಪೊಲೀಸ್ ಇಲಾಖೆ ಮುಂಬರುವ 2024 ರ ಲೋಕಸಭಾ ಚುನಾವಣೆಯಲ್ಲಿ ಯಾವುದೆ ರೀತಿಯಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಣ ಹಾಗೂ ಭದ್ರತಾ ದೃಷ್ಟಿಯಿಂದ ಸರ್ಕಾರ ಕರ್ನಾಟಕ ಪೊಲೀಸ್ ಇಲಾಖೆ ಮೊದಲ ಹಂತಗಳಲ್ಲಿ ಬೆಳಗಾವಿ ಜಿಲ್ಲೆ, ವಿಜಯಪುರ, ಬಾಗಲಕೋಟ, ಹುಬ್ಬಳ್ಳಿ ಧಾರವಾಡ ಜಿಲ್ಲೆ ತಾಲೂಕು ಸೇರಿದಂತೆ 176 ಪಿ.ಎಸ್.ಐ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆರಕ್ಷಕ ಮಹಾನಿರೀಕ್ಷರಾದ ವಿಕಾಸ್ ಕುಮಾರ ಅವರು ಬೆಳಗಾವಿ ಉತ್ತರ ವಲಯ ಕಛೇರಿಯಿಂದ ಆದೇಶ ಮಾಡಿದ್ದಾರೆ.