ಹುಬ್ಬಳ್ಳಿ: ಹುಬ್ಬಳ್ಳಿಯ ಉತ್ತರ ವಿಭಾಗದ ಖಡಕ್ ಪೊಲೀಸ್ ಅಧಿಕಾರಿಯಾದ ಎಸಿಪಿ ಬಲ್ಲಪ್ಪ ನಂದಗಾವಿ ಅವರು ವರ್ಗಾವಣೆ ಹಿನ್ನಲೆಯಲ್ಲಿ ನಗರದ ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಗುರುವಾರ ಪೊಲೀಸ್ ಸಿಬ್ಬಂದಿಗಳಿಂದ ಆತ್ಮೀಯವಾಗಿ ಬೀಳ್ಕೋಡುಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯ ಸರ್ಕಾರ ಮೊನ್ನೆಯಷ್ಟೇ ನಂದಗಾವಿ ಅವರನ್ನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಉತ್ತರ ಉಪವಿಭಾಗದ ಠಾಣೆಗೆ ಉಪ ಪೊಲೀಸ್ ಆಯುಕ್ತರಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.
ಖಡಕ್ ಪೊಲೀಸ್ ಅಧಿಕಾರಿಯಾಗಿದ್ದ ಅವರನ್ನು ಬೀಳ್ಕೋಡುಗೆ ನೀಡಲಾಯಿತು. ಈ ವೇಳೆ ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಯಂತಿ ಗೌಳಿ, ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ, ಕಲ್ಯಾಣಿ, ನವನಗರ ಠಾಣೆಯ ಪಿಎಸ್ಐ ಸಾತಣ್ಣವರ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.