ಅಪರಿಚಿತ ಯುವಕನ ಶವ ಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರ ಹಾಗೂ ಅಶೋಕನಗರ ಮದ್ಯ ಇರುವ ರೈಲ್ವೇ ಹಳಿಯ ಮೇಲೆ ನಡೆದಿದೆ.
ವ್ಯಕ್ತಿಯ ಕಾಲಿನ ಬಾಗ ಹಾಗೂ ದೇಹದ ಬಾಗ ಬೇರೆ ಬೇರೆ ಸ್ಥಳಗಳಲ್ಲಿ ಬಿದ್ದಿದ್ದು, ಚಲಿಸುತ್ತಿದ್ದ ರೈಲಿನ ಮದ್ಯ ಹೋಗಿ ಈ ದುರಂತ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಮೃತ ಯುವಕನ ಯಾರೆಂಬ ಮಾಹಿತಿ ಇನ್ನು ಲಭ್ಯವಾಗಿಲ್ಲ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಅನ್ನೋದು ತನಿಖೆ ನಂತರ ತಿಳಿದು ಬರಬೇಕಾಗಿದೆ. ಸ್ಥಳಕ್ಕೆ ವಿದ್ಯಾನಗರ ಪೋಲಿಸರು ಹಾಗೂ ರೈಲ್ವೇ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.