ಕಲಘಟಗಿ: ರಸ್ತೆಯ ಪಕ್ಷದಲ್ಲಿ ವಾಹನ ಸವಾರರ ಸಾಕ್ಷರತೆಗಾಗಿ ಅಳವಡಿಸಿರುವ ಮೆಟಲ್ ಕ್ರಾಸ್ ಬ್ಯಾರಿಯರ್ಸ್’ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕಲಘಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿತರನ್ನು ಹಳಿಯಾಳ ತಾಲೂಕಿನ ಕವಲವಾಡ ಗ್ರಾಮದ ಮೊಹಮ್ಮದ್ ಕಾರವಾರ (22), ಬಾಬಾಜಾನ್ ಕಾರವಾರ (52), ಹಳಿಯಾಳ ಪಟ್ಟಣದ ಮುಲ್ಲಾ ಓಣಿಯ ರಿಜ್ವಾನ್ ಸೈಯದ್ (20), ಮುಂಬೈ ಮೂಲದ ಮೋಬಿನ್ ಶೇಖ್(35) ಎಂದು ಗುರುತಿಸಲಾಗಿದೆ.

ಆರೋಪಿಗಳು ಕಳೆದ ನವೆಂಬರ್ 23 ರಂದು ಬೆಲವಂತರ ಕೆರೆಯ ಹತ್ತಿರ ರಸ್ತೆಯ ಬದಿಯಲ್ಲಿ ಹಾಕಿರುವ 3.60 ಲಕ್ಷ ರೂ ವೆಚ್ಚದ 45 ಮೆಟಲ್ ಕ್ರಾಸ್ ಬ್ಯಾರಿಯರ್ಸ್ ಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.ಈ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತರಿಂದ 8.85 ಲಕ್ಷ ಮೌಲ್ಯದ 45 ಮೆಟಲ್ ಕ್ರಾಸ್ ಬ್ಯಾರಿಯರ್ಸ್, ಟಾಟಾ ಏಸ್ ಗೂಡ್ಸ್ ವಾಹನ, ಒಂದು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.